ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಗ್ರಾಮದ ಹಿರಿಯರು ಕೇವಲ ಐದು ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದು, ಈ ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಬಿಹಾರದ ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಅರುಣ್ ಪಂಡಿತ್ ಎಂಬ ವ್ಯಕ್ತಿ ತನ್ನ ಮನೆಯ ಸಮೀಪ ವಾಸಿಸುತ್ತಿದ್ದ ಐದು ವರ್ಷದ ಬಾಲಕಿಯನ್ನು ಚಾಕಲೇಟ್ ಆಸೆ ತೋರಿಸಿ ಕೋಳಿ ಫಾರಂಗೆ ಕರೆದೊಯ್ದು ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಷಯ ತಿಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಆದರೆ, ಗ್ರಾಮದ ಹಿರಿಯರು ತಡೆದು ಪಂಚಾಯಿತಿ ಮಾಡಿದರು. ಈ ಪಂಚಾಯಿತಿಯಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ. ಇದರಿಂದ ಗ್ರಾಮದ ಹಿರಿಯರು ಆರೋಪಿ ಅತ್ಯಾಚಾರವನ್ನು ಒಪ್ಪಿಕೊಳ್ಳದ ಕಾರಣ, ಮಗುವನ್ನು ತೆಗೆದುಕೊಂಡಿದ್ದಕ್ಕಾಗಿ ಮಾತ್ರ ಶಿಕ್ಷೆ ವಿಧಿಸಿದ್ದಾರೆ. ಅದೂ ಕೂಡ ಐದು ಬಸ್ಕಿ ಹೊಡೆಯುವಂತೆ ಆದೇಶಿಸಿದರು. ಎಲ್ಲರ ಮುಂದೆ ಬಸ್ಕಿ ಹೊಡೆದ ಬಳಿಕ ಆತನ್ನು ಬಿಟ್ಟು ಕಳಿಸಿದ್ದಾರೆ.
#WATCH: Rapist allowed to go after 5 sit-ups in Bihar's Nawada. The panchayat said he was punished for taking the minor to a deserted place. No case filed. https://t.co/mv4H3NZxjR#Bihar #Nawada #India #IndiaNews #BiharNews pic.twitter.com/JeH3hcquEA
— Free Press Journal (@fpjindia) November 25, 2022
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಚಾರವಾಗಿ ನೆಟ್ಟಗರು ಗ್ರಾಮದ ಹಿರಿಯರ ತೀರ್ಪು ಅನಾಗರಿಕತೆಯ ಪ್ರತೀಕ ಎಂದು ಟೀಕಿಸಿದ್ದಾರೆ. ಈ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಗ್ರಾಮದ ಹಿರಿಯರನ್ನೂ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ.