VIRAL VIDEO| ಕದ್ದ ಬೈಕ್‌ನಲ್ಲಿ ಮೈಮರೆತು ರೊಮ್ಯಾನ್ಸ್:‌ ಪೊಲೀಸರಿಂದ ಜೋಡಿಗೆ ಸಿಕ್ತು ಬಿಗ್‌ ಗಿಫ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಅರಿವಿಲ್ಲದೆ ಮನಸೋ ಇಚ್ಛೆ ವರ್ತಿಸುತ್ತಾರೆ. ಬೈಕ್ ರೈಡ್ ಮಾಡೋದು, ಅದೇ ಬೈಕ್ ನಲ್ಲಿ ರೋಮ್ಯಾನ್ಸ್ ಮಾಡೋದು. ಸುತ್ತಮುತ್ತಲಿನ ಜನರು ಇಂತಹ ಘಟನೆಗಳ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಅಂಥದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಛತ್ತೀಸ್‌ಗಢದ ದರ್ಗ್ ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಜೋಡಿ ಆಕ್ಷೇಪಾರ್ಹವಾಗಿ ವರ್ತಿಸಿದ್ದರು. ಚಲಿಸುತ್ತಿರುವ ಬೈಕ್‌ನಲ್ಲಿ ಇಬ್ಬರೂ ಮುಖಾಮುಖಿ ಕುಳಿತು ರೊಮ್ಯಾನ್ಸ್‌ಗಿಳಿದಿದ್ದಾರೆ. ಇದು ಆಕ್ರಮಣಕಾರಿ ಮಾತ್ರವಲ್ಲ, ಅಪಾಯಕಾರಿಯೂ ಹೌದು. ಅಕಸ್ಮಾತ್ ಬೈಕ್ ಮೇಲಿನಿಂದ ಬಿದ್ದರೆ ಇವರ ಜೊತೆಗೆ ಅಕ್ಕಪಕ್ಕದಲ್ಲಿ ಹೋಗುವವರಿಗೆ ಅಪಾಯ. ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಈ ವೀಡಿಯೋದಲ್ಲಿ ಕಾಣುವ ಬೈಕ್ ನಂಬರ್ ಹೊಂದಿಲ್ಲ. ಈ ಬೈಕ್ ನೋಂದಣಿಯಾಗಿಲ್ಲ. ಆದರೆ, ಪೊಲೀಸರು ತನಿಖೆ ನಡೆಸಿ  ಬೈಕ್ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ನಡುವೆ ತನಿಖೆಯಲ್ಲಿ ಮತ್ತೊಂದು ವಿಷಯ ಹೊರಬಿದ್ದಿದೆ. ಈ ವಿಡಿಯೋದಲ್ಲಿ ಕಾಣುವ ಬೈಕ್ ಉತ್ತರ ಪ್ರದೇಶದಲ್ಲಿ ಕಳ್ಳತನವಾಗಿದೆ. ಇದರ ಮೂಲ ಬೆಲೆ ರೂ.1.50 ಲಕ್ಷಗಳಾಗಿರುತ್ತದೆ. ಆದರೆ, ಆ ವ್ಯಕ್ತಿ 9 ಸಾವಿರ ರೂ.ಗೆ ಖರೀದಿಸಿ ಬಳಸುತ್ತಿದ್ದಾರೆ. ಕದ್ದ ಗಾಡಿಯಾಗಿದ್ದರಿಂದ ನೋಂದಣಿ ಮಾಡಿರಲಿಲ್ಲ. ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!