ಬಾಲಕಿಯ ನೃತ್ಯವನ್ನು ಅನುಕರಿಸಿದ ಗಜರಾಜ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಚಿಕ್ಕ ಮಕ್ಕಳಿಗೆ ಆನೆಗಳಂದರೆ ಬಹಳ ಪ್ರೀತಿ, ಅದರ ಮೇಲೆ ಹತ್ತಿ ಓಡಾಡುವುದೆಂದರೆ ಇನ್ನೂ ಖುಷಿ. ಇದೀಗ ಐದು ವರ್ಷದ ಬಾಲಕಿಯೊಬ್ಬಳು ಆನೆಯನ್ನು ನೋಡಿ ಖುಷಿಯಿಂದ ಕುಣಿದಿದ್ದಾಳೆ. ಇದರೊಂದಿಗೆ ಆನೆ ಬಾಲಕಿಯನ್ನು ಅನುಕರಿಸಿ ಡ್ಯಾನ್ಸ್ ಮಾಡಿ ಎಲ್ಲರನ್ನೂ ಆಕರ್ಷಿಸಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ.  ‘ಇದರಲ್ಲಿ ಉತ್ತಮವಾದ ನೃತ್ಯ ಯಾವುದು?’ ಎಂದು ಪ್ರಶ್ನಿಸಿದ್ದಾರೆ. ಪ್ರಾಣಿಗಳಿಗೂ ಭಾವನೆಗಳಿವೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!