ಪುಟ್ಟ ಕಂದನನ್ನು ಹೊತ್ತುಕೊಂಡ ರಿಕ್ಷಾ ತುಳಿಯುತ್ತಿರುವ ತಂದೆ: ಕಂಬನಿ ತರಿಸುವ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆ ರಿಕ್ಷಾವಾಲಾ ಎಷ್ಟೇ ಕಷ್ಟ ಪಟ್ಟರೂ ತಂದೆಯಾಗಿ ತನ್ನ ಜವಾಬ್ದಾರಿಯನ್ನು ನಿರ್ಲಕ್ಷಿಸಲಿಲ್ಲ. ಆತನ ಪತ್ನಿ ಬೇರೊಬ್ಬನನ್ನು ಪ್ರೀತಿಸಿ ಮನೆ ಬಿಟ್ಟು ಹೋದರೂ ಎರಡು ಪುಟ್ಟ ಮಕ್ಕಳ ಜವಾಬ್ದಾರಿಯನ್ನು ಹೊತ್ತು ಜೀವನ ನಡೆಸುತ್ತಿದ್ದಾನೆ. ರಾಜೇಶ್ ಎಂಬ ವ್ಯಕ್ತಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ರಿಕ್ಷಾ ಪುಟ್ಟ ಮಗುವನ್ನು ಹೆಗಲ ಮೇಲೆ ಹೊತ್ತು ರಿಕ್ಷಾ ಓಡಿಸುತ್ತಿರುವ ವಿಡಿಯೋ ಶೇರ್‌ ಆಗಿದ್ದು, ದೇಶಾದ್ಯಂತ ವೈರಲ್ ಆಗಿದೆ.

ಹಲವು ವರ್ಷಗಳ ಹಿಂದೆ ಬಿಹಾರದಿಂದ ಉದ್ಯೋಗಕ್ಕಾಗಿ ಜಬಲ್‌ಪುರಕ್ಕೆ ಬಂದು ನೆಲೆಸಿದ ಈತ ಸಿಯೋನಿ ಜಿಲ್ಲೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾದ. ಅವರ ಪ್ರೀತಿಯ ಸಂಕೇತವಾಗಿ ಒಂದು ಹೆಣ್ಣು, ಮತ್ತು ಗಂಡು ಮಗು ಜನಿಸಿತು. ಆದರೆ ಕೆಲ ತಿಂಗಳ ಹಿಂದೆ ಅವರ ಪತ್ನಿ ಬೇರೊಬ್ಬನನ್ನು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದಾಳೆ. ರಾಜೇಶ್ ತನ್ನ ಮಕ್ಕಳು ಅನಾಥರಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಮಗಳಿಗೆ ಸುಮಾರು ಮೂರು ವರ್ಷ, ಹೆಣ್ಣು ಮಗುವನ್ನು ಮನೆಯಲ್ಲಿ ಬಿಟ್ಟು ತನ್ನ ಒಂದು ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ರಿಕ್ಷಾ ತುಳಿಯುತ್ತಾನೆ.

ರಿಕ್ಷಾದಿಂದ ಬಂದ ಹಣದಲ್ಲಿ ಮಕ್ಕಳನ್ನು ಸಾಕುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಮ್ಮ ಮಕ್ಕಳನ್ನು ಚಿನ್ನದಂತೆ ನೋಡಿಕೊಳ್ಳುವ ಆಸೆ ನನಗೆ. ಸರ್ಕಾರದಿಂದ ಏನಾದರೂ ಸಹಾಯ ಸಿಕ್ಕರೆ ನನ್ನ ಕಷ್ಟಕ್ಕೆ ತುಸು ನೆರವಾಗುತ್ತದೆ ಎಂಬುದು ಅವರ ಅಪೇಕ್ಷೆ. ಈತನ ಸಂಕಷ್ಟ ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!