May 31, 2026
Sunday, May 31, 2026
spot_img

Viral | ಏನ್ ಐಡಿಯಾ ಗುರೂ! ಕಸ ಬಿಸಾಡೋಕೆ ನಾಯಿಗೆ ಟ್ರೈನಿಂಗ್ ಕೊಟ್ಟ ಮಾಲೀಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಸಾಮಾನ್ಯ ಸಿಸಿಟಿವಿ ದೃಶ್ಯವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ನಗರದ ರಸ್ತೆಯಲ್ಲಿ ಕತ್ತಲಲ್ಲಿ ಮೌನವಾಗಿ ನಡೆದು ಬಂದ ನಾಯಿ, ಬಾಯಲ್ಲಿ ಕಸದ ಚೀಲ ಹಿಡಿದು ರಸ್ತೆ ಬದಿಯಲ್ಲಿ ಇಟ್ಟು ಹೋಗುತ್ತದೆ. ಈ ದೃಶ್ಯ ಕೇವಲ ಅಚ್ಚರಿಯಲ್ಲ, ಸಂಶಯಕ್ಕೂ ಕಾರಣವಾಗಿದೆ.

ವಿಡಿಯೋದಲ್ಲಿ ನಾಯಿ ದೊಡ್ಡ ಕಸದ ಚೀಲವನ್ನು ನಿರ್ದಿಷ್ಟ ಸ್ಥಳಕ್ಕೆ ತಂದು ಇಟ್ಟು ಮತ್ತೆ ಹಿಂದಿರುಗುತ್ತಿರುವುದು ಕಾಣುತ್ತದೆ. ಅಧಿಕಾರಿಗಳ ಪ್ರಕಾರ, ಇದು ಆಕಸ್ಮಿಕ ಘಟನೆ ಅಲ್ಲ; ಮಾಲೀಕ ಕ್ಯಾಮೆರಾದಲ್ಲಿ ಸಿಕ್ಕಿಬೀಳದಂತೆ ನಾಯಿಯನ್ನು ತರಬೇತಿ ನೀಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣವನ್ನು ತನಿಖೆ ಮಾಡಿದ ಪರಿಸರ ಘಟಕ, ಆರೋಪಿಯನ್ನು ಗುರುತಿಸಿ ದಂಡ ವಿಧಿಸಿದೆ.

ಇದನ್ನೂ ಓದಿ:

ನಗರ ಶಿಸ್ತು ಹಾಗೂ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಕಸ ತ್ಯಾಜ್ಯ ಇಟಲಿಯಲ್ಲಿ ಗಂಭೀರ ಸಮಸ್ಯೆಯಾಗಿ ಉಳಿದಿದೆ. ಕಳೆದ ವರ್ಷ ಸಾವಿರಾರು ಪ್ರಕರಣಗಳು ದಾಖಲಾಗಿದ್ದು, ಹಿಂದಿನ ವರ್ಷಕ್ಕಿಂತ ಗಣನೀಯ ಏರಿಕೆ ಕಂಡುಬಂದಿದೆ. ಇಟಲಿ ಕಾನೂನು ಪ್ರಕಾರ ಇಂತಹ ಕೃತ್ಯಗಳಿಗೆ ಭಾರಿ ದಂಡದ ಜೊತೆಗೆ ಕ್ರಿಮಿನಲ್ ಪ್ರಕರಣವೂ ಎದುರಾಗಬಹುದು ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !