5 ವರ್ಷಗಳಲ್ಲೇ ಅತ್ಯಧಿಕ ಉದ್ಯೋಗ ಕಡಿತಕ್ಕೆ ಚಿಂತಿಸುತ್ತಿದೆ ವೋಡಾಫೋನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯು ಹಲವಾರು ಕಂಪನಿಗಳನ್ನು ಕಾಡುತ್ತಿದ್ದು ಉದ್ಯೋಗ ಕಡಿತಗಳಿಗೆ ದಿಗ್ಗಜ ಕಂಪನಿಗಳು ಈಗಾಗಲೇ ಸಾಕ್ಷಿಯಾಗಿವೆ. ನಿತ್ಯವೂ ಹಲವಾರು ಕಂಪನಿಗಳು ಈ ರೀತಿಯ ಉದ್ಯೋಗ ಕಡಿತಗಳನ್ನು ನಡೆಸುತ್ತಿದ್ದು ಇದೀಗ ಈ ಸಾಲಿಗೆ ಟೆಲಿಕಾಂ ದೈತ್ಯ ವೋಡಾಫೋನ್‌ ಸೇರ್ಪಡೆಯಾಗಿದೆ. ಈಗಾಗಲೇ ಭಾರತದಲ್ಲಿ ನಷ್ಟದಲ್ಲಿರುವ ಕಂಪನಿ ತನ್ನ ವೆಚ್ಚಕಡಿತದ ಭಾಗವಾಗಿ ನೂರಾರು ಉದ್ಯೋಗಿಗಳನ್ನು ಹೊರಹಾಕಲು ಚಿಂತಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿರುವ ಪ್ರಕಾರ, ಇದು ಕಂಪನಿಯ ಐದು ವರ್ಷಗಳಲ್ಲಿಯೇ ಅತಿ ದೊಡ್ಡ ಉದ್ಯೋಗ ಕಡಿತವಾಗಲಿದೆ. ವೊಡಾಫೋನ್ ಜಾಗತಿಕವಾಗಿ ಸುಮಾರು 104,000 ಜನರನ್ನು ಮತ್ತು ಯುಕೆಯಲ್ಲಿ 9,400 ಜನರನ್ನು ನೇಮಿಸಿಕೊಂಡಿದೆ. ಉದ್ಯೋಗ ಕಡಿತಗಳು ಹೆಚ್ಚಾಗಿ ಕಂಪನಿಯ ಲಂಡನ್‌ ಕೇಂದ್ರ ಕಚೇರಿಯಲ್ಲಿ ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಕಂಪನಿಯು 2026 ರ ವೇಳೆಗೆ 1 ಬಿಲಿಯನ್ ಯುರೋಗಳಷ್ಟು (1.08 ಶತಕೋಟಿ ಡಾಲರ್‌) ವೆಚ್ಚವನ್ನು ಕಡಿತಗೊಳಿಸುವುದಾಗಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!