Saturday, February 24, 2024

ವಾಡಾ ಅಧ್ಯಕ್ಷ ಕೊಟಗಿನಹಾಳ್ ಶರಣಪ್ಪರಿಗೆ ಸನ್ಮಾನ

ಹೊಸದಿಗಂತ ವರದಿ, ಬಳ್ಳಾರಿ:

ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಕೊಟಗಿನಹಾಳ್ ಶರಣಪ್ಪ ಅವರನ್ನು ಅವರ ಅಭಿಮಾನಿಗಳು, ‌ಬೆಂಬಲಿಗರು, ಪಕ್ಷದ ಹಿರೀಯರು ಬುಧವಾರ ಸನ್ಮಾನಿಸಿ ಗೌರವಿಸಿದರು. ವಾಡಾ ಕಚೇರಿ ಸಭಾಂಗಣದಲ್ಲಿ ಸರಳ, ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿಮಾನಿಗಳು, ಬೆಂಬಲಿಗರು ಹೂವು ಗುಚ್ಛ ನೀಡಿ ಸನ್ಮಾನಿಸಿ ಗೌರವಿಸಿದರು. ನಂತರ ಮಾತನಾಡಿದ ಅವರು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇದೇ ರೀತಿ‌ ಮುಂದುವರೆಯಲಿ, ನಿಮ್ಮೆಲ್ಲರ ನಿರೀಕ್ಷೆಯಂತೆ ಅವದಿಯಲ್ಲಿ ಈ ಕ್ಷೇತ್ರದ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ. ವಾಡಾ ಅಧ್ಯಕ್ಷರಾದ ಬಳಿಕ ಸನ್ಮಾನ, ಸಮಾರಂಭಗಳು ನಡೆಯುತ್ತಿದ್ದು, ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ. ಎಲ್ಲದಕ್ಕೂ ‌ನಾಗರಿಕರ ಸಹಕಾರ ಅತ್ಯಗತ್ಯ, ಅವಧಿಯಲ್ಲಿ ಮಾದರಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ರಾಜ್ಯದ ಗಮನಸೆಳೆಯುವೆ, ಇದು ಮಾತಲ್ಲ, ನುಡಿದಂತೆ ‌ನಡೆಯುವೆ, ಎಂದು ಸುಳ್ಳು ಹೇಳಿದ‌ ಜಾಯಮಾನ ನನ್ನದಲ್ಲ, ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವೇ ಅಸ್ತಿತ್ವದಲ್ಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರತೆಯಾಗೊಲ್ಲ ಎನ್ನುವ ವಿಶ್ವಾಸವಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು, ಅಭಿವೃದ್ಧಿಯ ಹರಿಕಾರ ಎನ್ನುವ ಅತ್ಯುತ್ತಮ ಹೆಸರು ಪಡೆದಿದ್ದು, ಅವರ ಸಹಕಾರದಿಂದ ಅವಧಿಯಲ್ಲಿ ವಾಡಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಿತ್ರಣವೇ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ಮುಖಂಡರು ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!