October 9, 2026
Friday, October 9, 2026
spot_img

LIFE | ಸದಾ ಖುಷಿಯಾಗಿರಬೇಕಾ? ಈ ಮೂರು ರೂಲ್ಸ್‌ ಜೀವನದಲ್ಲಿ ಅಳವಡಿಸಿಕೊಳ್ಳಿ

ಜೀವನದಲ್ಲಿ ಎಲ್ಲವೂ ಇದ್ರೂ ಖುಷಿ ಅನ್ನೋದು ಇರೋದಿಲ್ಲ. ಬಡವನ ಗುಡಿಸಿಲಿನಲ್ಲಿಯೂ ನಗುವಿನ ಸದ್ದು ಇದೆ, ಶ್ರೀಮಂತರ ಬಂಗಲೆಗೂ ಕಣ್ಣೀರಿದೆ. ಸುಖ ಶಾಂತಿ ನೆಮ್ಮದಿ ಅನ್ನೋದು ನಾವು ಜೀವನವನ್ನು ನೋಡುವ ರೀತಿಯಾಗಿದೆ. ಸದಾ ಜೀವನ ಚೆನ್ನಾಗಿರಲಿ, ಖುಷಿ ತುಂಬಿರಲಿ ಎಂದರೆ ಈ ಮೂರು ಟಿಪ್ಸ್‌ ಫಾಲೋ ಮಾಡಿ..

ನಿತ್ಯವೂ ಒಂದೂವರೆ ಗಂಟೆಯಷ್ಟು ಫಿಸಿಕಲ್‌ ಆಕ್ಟಿವಿಟಿ ಮಾಡಿ. ವ್ಯಾಯಾಮ, ಜಿಮ್‌, ಡ್ಯಾನ್ಸ್‌, ಯೋಗ ಯಾವುದೇ ಆಗಲಿ ಫಿಸಿಕಲ್‌ ಆಕ್ಟಿವಿಟಿ ಮುಖ್ಯ.

ನಿಮ್ಮ ಬಳಿ ಏನೇನಿದ್ಯೋ ಅದಕ್ಕೆ ಧನ್ಯವಾದ ಹೇಳೋದನ್ನು ಕಲಿಯಿರಿ. ನೀವು ಅಳುತ್ತಾ ಜೀವಿಸುತ್ತಿರುವ ಜೀವನ ಎಷ್ಟೋ ಮಂದಿಯ ಕನಸಾಗಿರುತ್ತದೆ ಎನ್ನೋದನ್ನು ಮರೆಯಬೇಡಿ. ಯಾವುದನ್ನೂ ಗ್ರಾಂಟೆಂಡ್‌ ಆಗಿ ತಗೋಬೇಡಿ.

ನಿಮ್ಮ ಕೈಲಾದ ಸಹಾಯ ಮಾಡಿ. ನೂರು ರೂಪಾಯಿ ದುಡಿದರೆ ಐದು ರೂಪಾಯಿ ದಾನ ಮಾಡಿ. ಇದು ನಿಮ್ಮಲ್ಲಿ ಆಕ್ಸಿಟೋಸಿನ್‌ ಎನ್ನುವ ಗುಡ್‌ ಕೆಮಿಕಲ್‌ ರಿಲೀಸ್‌ ಮಾಡುತ್ತದೆ.

Must Read