ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ತರಕಾರಿಗಳ ಮೇಲೆ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕೀಟಗಳು ವೇಗವಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಸಮಯದಲ್ಲಿ ಕೆಲವು ತರಕಾರಿಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
ಸರಿಯಾಗಿ ತೊಳೆಯದೆ ಅಥವಾ ಹಳೆಯ ತರಕಾರಿಗಳನ್ನು ಬಳಸಿದರೆ ಹೊಟ್ಟೆ ಸೋಂಕು, ಅಜೀರ್ಣ ಮತ್ತು ಆಹಾರ ವಿಷಬಾಧೆಯಂತಹ ಸಮಸ್ಯೆಗಳು ಉಂಟಾಗಬಹುದು.
ವಿಶೇಷವಾಗಿ ಸೊಪ್ಪುಗಳು, ಎಲೆಕೋಸು, ಹೂಕೋಸು ಮತ್ತು ಅಣಬೆಗಳನ್ನು ಖರೀದಿಸುವಾಗ ಜಾಗರೂಕರಾಗಿರಿ. ಇವುಗಳಲ್ಲಿ ಕೀಟಗಳು ಮತ್ತು ಕೊಳಕು ನೀರು ಸಿಲುಕಿರುವ ಸಾಧ್ಯತೆ ಹೆಚ್ಚು. ಬಳಸುವ ಮೊದಲು ಉಪ್ಪು ಅಥವಾ ಅರಿಶಿಣ ಬೆರೆಸಿದ ನೀರಿನಲ್ಲಿ ಚೆನ್ನಾಗಿ ತೊಳೆದು ನಂತರವೇ ಅಡುಗೆ ಮಾಡುವುದು ಉತ್ತಮ.
ಇದನ್ನೂ ಓದಿ:
ಈಗಾಗಲೇ ಕೊಳೆತ, ಕಪ್ಪು ಕಲೆಗಳಿರುವ ಅಥವಾ ದುರ್ವಾಸನೆ ಬರುವ ತರಕಾರಿಗಳನ್ನು ಖರೀದಿಸಬೇಡಿ.
ಮಳೆಗಾಲದಲ್ಲಿ ತಾಜಾ ತರಕಾರಿಗಳು, ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ, ಸೀಮೆ ಬದನೆಕಾಯಿ ಹಾಗೂ ಇತರ ತರಕಾರಿಗಳನ್ನು ಬಳಸುವುದು ಆರೋಗ್ಯಕರ. ಯಾವುದೇ ತರಕಾರಿಯನ್ನು ಹಸಿಯಾಗಿ ತಿನ್ನುವುದಕ್ಕಿಂತ ಚೆನ್ನಾಗಿ ಬೇಯಿಸಿ ಸೇವಿಸುವುದು ಸುರಕ್ಷಿತ. ಸ್ವಚ್ಛತೆ ಮತ್ತು ತಾಜಾತನಕ್ಕೆ ಆದ್ಯತೆ ನೀಡಿದರೆ ಮಳೆಗಾಲದಲ್ಲೂ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.



