ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗೆ ಅಥವಾ ಸಂಜೆ ದಿನಕ್ಕೆ ಕನಿಷ್ಠ 30 ಗಂಟೆಗಳ ಕಾಲ ದೇಹಕ್ಕೆ ವಾಕಿಂಗ್ ಅತ್ಯಗತ್ಯ. ಬೇರೇನೆ ಮಾಡಿದರೂ ನಡೆದಾಗಲೇ ಕಾಲು, ಕೈ, ಮೆದುಳು, ಹೃದಯ ಎಲ್ಲದಕ್ಕೂ ವ್ಯಾಯಾಮ ಸಿಗುತ್ತೆ.. ನಿಮಗೆ ಕೆಲಸದ ಒತ್ತಡದಲ್ಲಿ ನಿಗದಿತ ಸಮಯಕ್ಕೆ ವಾಕ್ ಮಾಡಲು ಆಗಿಲ್ಲ ಅಂತ ಸುಮ್ಮನಾಗಬೇಡಿ. ಈ ರೀತಿ ಕೂಡ ನೀವು ವಾಕಿಂಗ್ ಮಾಡಬಹುದು…
- ಮೆಟ್ಟಿಲು ಹತ್ತಿ: ಮೆಟ್ರೋ, ಆಫೀಸು, ಮನೆ.. ಎಲ್ಲಾದರೂ ಸರಿ ಆದಷ್ಟು ಮೆಟ್ಟಿಲುಗಳ ಮೂಲಕ ನಡೆದು ಹೋಗಿ. ಲಿಫ್ಟ್ ಹತ್ತಬೇಡಿ.
- ಮೀಟಿಂಗ್: ಸಾಮಾನ್ಯ ಮೀಟಿಂಗ್ ಗಳು ಹೋಟೆಲ್, ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯುತ್ತೆ. ಕುಳಿತು ಮೀಟಿಂಗ್ ಮಾಡುವ ಬದಲು ಒಂದು ವಾಕ್ ಮಾಡಿ ಚರ್ಚಿಸಿ.
- ಎಕ್ಸ್ ಸರ್ಸೈಸ್ ಬಾಲ್: ವ್ಯಾಯಾಮಕ್ಕೆ ಬಳಸುವ ಬಾಲ್ ಮೇಲೆ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.
- ಪಾರ್ಕಿಂಗ್: ಶಾಪಿಂಗ್ ಹೋದಾಗ ನಿಮ್ಮ ಬೈಕ್ ಅಥವಾ ಕಾರುಗಳನ್ನು ಆದಷ್ಟು ದೂರ ಪಾರ್ಕ್ ಮಾಡಿ. ಇದು ಕೂಡ ವಾಕಿಂಗ್ ಮಾಡೋಕೆ ಒಂದು ರೀಸನ್ ಆಗುತ್ತೆ.
- ಪ್ರಾಣಿ: ಮನೆಯಲ್ಲಿ ಯಾವುದಾದರೂ ಒಂದು ಸಾಕು ಪ್ರಾಣಿಯನ್ನು ಬೆಳಸಿ. ಅದನ್ನು ವಾಕಿಂಗ್ ಕರೆದುಕೊಂಡು ಹೋಗುವ ನೆಪದಲ್ಲಿ ನೀವೂ ವಾಕ್ ಮಾಡಬಹುದು.
- ಡ್ಯಾನ್ಸ್: ವಾರಕ್ಕೆ ಒಂದೆರಡು ದಿನ ಎಲ್ಲಾದರೂ ಡ್ಯಾನ್ಸ್ ಪಾರ್ಟಿ ಆಯೋಜಿಸಿ. ಎಂಜಾಯ್ ಮಾಡಿ. ಡ್ಯಾನ್ಸ್ ಕೂಡ ದೇಹಕ್ಕೆ ಒಂದು ಅದ್ಭುತ ವ್ಯಾಯಾಮ.
- ಟಿವಿ: ಟಿವಿ ನೋಡುವಾಗ ಸುಮ್ಮನೆ ಕೂರುವ ಬದಲು ಒಂದು ಸ್ವಲ್ಪ ವ್ಯಾಯಾಮ ಮಾಡಿ. ಮನೆಯ ಸುತ್ತ ರೌಂಡ್ ಹಾಕಿ.