ದಿಗಂತ ವರದಿ ವಿಜಯಪುರ:
ನಾವೆಲ್ಲ ಮೂಲ ಬಿಜೆಪಿಗರು. ಬಿಜೆಪಿ ಕಟ್ಟಿದವರು. ಇರೋ ಪಕ್ಷ ಬಿಟ್ಟು ಬೇರೆ ಪಕ್ಷ ಕಟ್ಟೋ ಚಟ ಇಲ್ಲ. ಶಕ್ತಿಯೂ ನಮ್ಮಲ್ಲಿ ಇಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿ, ಯತ್ನಾಳ ಹೊಸ ಪಕ್ಷ ಕಟ್ಟುವ ವಿಚಾರ ಇಲ್ಲ. ಎಲ್ಲಿ ಕಟ್ತೀರಿ, ಹೊಸ ಪಕ್ಷ ಎಲ್ಲಿ ಕಟ್ತಿರೀ. ಈಗ ಇರೋ ದೇವೆಗೌಡರ ಪಕ್ಷವೇ ಮಕ್ಕೊಂಡಿದೆ ಎಂದರು.
ನಮ್ಮ ಬಳಿ ಹಣ ಇದೆಯಾ? ಎಲ್ಲಾದ್ರೂ ಲೂಟಿ ಮಾಡಿದ್ದೇವಾ? ದೇವರ ಸಾಕ್ಷಿಯಾಗಿ ಹೊಸ ಪಕ್ಷ ಕಟ್ಟುವ ಬಗ್ಗೆ ಚರ್ಚೆ ಮಾಡಿಲ್ಲ. ಪಕ್ಷದ ನಾಯಕರಿಗೆ ನಮ್ಮ ಮೇಲೆ ವಿಶ್ವಾಸ ಇದೆ ಎಂದರು.
ಇನ್ನು ಜಿಲ್ಲೆಗೆ ನ್ಯಾಯ ನೀಡುವುದಾಗಿ, ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಹುಟ್ಟು ಹಬ್ಬದ ದಿನವೇ ವಿಶೇಷ 50 ಕೋಟಿ ಅನುದಾನ ನೀಡಿದ್ದಾರೆ ಎಂದರು.
ಅಲ್ಲದೇ, ಬಿಜೆಪಿಯ ಶಾಸಕರು ಯಾರೂ ಕಾಂಗ್ರೆಸ್ ಟಚ್ ನಲ್ಲಿ ಇಲ್ಲ. ಇದು ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯದ ಜಗಳ ಆಗಿದೆ. ಇನ್ನೂ ಡಿಕೆಶಿ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಿದ್ದು ರೈತರಿಗಾಗಿ, ಜನರಿಗಾಗಿ ಅಲ್ಲ. ಪಾದಯಾತ್ರೆ ಮಾಡಿದ್ದು ಸಿದ್ದರಾಮಯ್ಯರನ್ನ ರಾಜಕೀಯವಾಗಿ ಮುಗಿಸಲು. ಅದಕ್ಕಾಗಿ ಅಲ್ಲಿ ಡಿಕೆಶಿ ಸಿಎಂ ಎಂದು ಎಲ್ಲರೂ ಕೂಗಿದರು ಎಂದರು.
ಇನ್ನೂ ಮೇಕೆದಾಟಲಿಲ್ಲ. ಇದರ ಅರ್ಥ ಸಿದ್ದರಾಮಯ್ಯನ್ನ ಮುಗಿಸೋದು ಎನ್ನವುದು. ಮೇಕೆದಾಟಲಿಲ್ಲಾಂದ್ರೆ ಅಲ್ಲಿ ಟಗರು ಇತ್ತು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಭವಿಷ್ಯ ಅಂಧಕಾರದತ್ತ ಹೋಗುತ್ತಿದೆ ಎಂದರು.