ಹೊಸ ದಿಗಂತ ವರದಿ, ಹುಬ್ಬಳ್ಳಿ:
ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಗಾಡುತ್ತಿದ್ದು, ಮುಂದೆ ಸಿಎಂ ಆಗಲು ಆ ಪಕ್ಷದಲ್ಲಿ ಪೈಪೋಟಿ ನಡೆದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಆ ಪಕ್ಷದ ಸಚಿವರು ಹಾಗೂ ಮುಖಂಡರು ೫೦ ಕೋಟಿಗೆ ಹರಾಜಿಗಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ನವರು ಆಫರ್ ನೀಡುತ್ತಿದ್ದಾರೆ ಹೊರತು ಬಿಜೆಪಿಯಲ್ಲ. ೬೬ ಶಾಸಕರ ಹೊಂದಿದ ನಾವು ಸರ್ಕಾರ ರಚಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಾಸಕರ ಖರೀದಿಸುವ ಮೂರ್ಖರು ನಾವಲ್ಲ ಎಂದರು.
ಸಿಎಂ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದ್ದಾರೆ. ಯಾವ ಕ್ಷಣದಲ್ಲಿಯೂ ರಾಜೀನಾಮೆ ನೀಡಬಹುದು.
ಸಿಎಂ ಸ್ಥಾನ ಅಲಾಡುತ್ತಿದ್ದು, ಅದು ಸ್ಥಾನ ಹರಾಜಿಗಿಡಲಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಸಿಎಂ ಇದ್ದಾರೆ ಎಂದು ಕಿಡಿಕಾರಿದರು.