ʼಸೂರ್ಯ ಬೇರೆಯೇ ಗ್ರಹದ ಬ್ಯಾಟ್ಸ್‌ಮನ್‌, ಆತನ ಖರೀದಿಸುವಷ್ಟು ಹಣ ಬಿಗ್‌ ಬ್ಯಾಷ್‌ ಬಳಿಯೂ ಇಲ್ಲʼ: ಮ್ಯಾಕ್ಸಿ ಬಹುಪರಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ಮಧ್ಯಮ ಕ್ರಮಾಂಕದ ದಾಂಡಿಗ ಸೂರ್ಯಕುಮಾರ್ ಯಾದವ್ ತಮ್ಮ ಕ್ರೀಡಾ ಬದುಕಿನ ಅತ್ಯಂತ ಉನ್ನತ ಪಾರ್ಮ್‌ನಲ್ಲಿದ್ದಾರೆ. ಐಸಿಸಿ ಟಿ 20 ಸ್ವರೂಪದಲ್ಲಿ ನಂ. 1 ಶ್ರೇಯಾಂಕ ಹೊಂದಿರುವ ಸೂರ್ಯ, ಇತ್ತೀಚೆಗೆ ನಡೆದ ಟಿ 20 ವಿಶ್ವಕಪ್‌ನ ಆರು ಪಂದ್ಯಗಳಲ್ಲಿ ಬರೋಬ್ಬರಿ 189.68 ಸ್ಟ್ರೈಕ್ ರೇಟ್‌ನಲ್ಲಿ 239 ರನ್ ಗಳಿಸಿ ಟೂರ್ನಿಯ ಟಾಪ್‌ ಸ್ಕೋರರ್‌ ಗಳಲ್ಲಿ ಒಬ್ಬರಾಗಿ ಮೂಡಿಬಂದಿದ್ದರು. ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ಸರಣಿಯಲ್ಲೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ ಸೂರ್ಯ ಎರಡು ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಸೇರಿದಂತೆ 124 ರನ್ ಗಳಿಸಿದರು. ಈ ಅದ್ಭುತ ಆಟಕ್ಕಾಗಿ ಅವರು ‘ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿಯನ್ನು ಪಡೆದರು. ಭಾರತವು 1-0 ಸರಣಿಯನ್ನು ಗೆದ್ದುಕೊಂಡಿತು, ಸೂರ್ಯಕುಮಾರ್ ಅವರ 51 ಎಸೆತಗಳ 111* ರನ್‌ ಗಳ ಇನ್ನಿಂಗ್ಸ್ ಎರಡನೇ ಟಿ 20 ಪಂದ್ಯದಲ್ಲಿ ಹಾರ್ದಿಕ್ ಪಡೆ ಗೆಲುವು ಸಾಧಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿತ್ತು. ಪ್ರಸ್ತುತ ಸೂರ್ಯ ಅತ್ಯದ್ಭುತ ಆಟಕ್ಕೆ ವಿಶ್ವಾದ್ಯಂತ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಜೊತೆಗೆ ಮಾಜಿ ಹಾಲಿ ಆಟಗಾರರು ಮನಬಿಚ್ಚಿ ಶ್ಲಾಘಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಹಾಗೂ ಐಪಿಎಲ್‌ ನಲ್ಲಿ ಆರ್ಸಿಬಿ ಪರ ಆಡುವ ಗ್ಲೆನ್ ಮ್ಯಾಕ್ಸ್‌ವೆಲ್ ಸೂರ್ಯ ಆಟಕ್ಕೆ ಭಾರೀ ಮೆಚ್ಚುಗೆ ಬ್ಯಕ್ತಪಡಿಸಿದ್ದಾರೆ.
“ಸೂರ್ಯ ಶತಕ ಸಿಡಿಸಿದ ಪಂದ್ಯವನ್ನು ನನಗೆ ಲೈವ್‌ ನೋಡಲು ಆಗಿರಲಿಲ್ಲ. ಒಮ್ಮೆ ಸ್ಕೋರ್ಕಾರ್ಡ್ ಅನ್ನು ಪರಿಶೀಲಿಸಿದಾಗ ಶಾಕ್‌ ಆದೆ. ಅದರ ಚಿತ್ರವನ್ನು ಫಿಂಚ್‌ ಗೆ (ಆರನ್ ಫಿಂಚ್) ಕಳುಹಿಸಿ. ‘ಅಲ್ಲೇನು ನಡೆಯುತ್ತಿದೆ ಮರಾಯ?  ಸೂರ್ಯ ಸಂಪೂರ್ಣ ವಿಭಿನ್ನ ಗ್ರಹದಿಂದ ಬಂದವನಂತೆ ಬ್ಯಾಟ್‌ ಬೀಸುತ್ತಿದ್ದಾನೆ! ಉಳಿದವರ ಸ್ಕೋರ್‌ಗಳನ್ನು ನೋಡು ಮತ್ತು ಕೇವಲ ಐವತ್ತೇ ಬಾಲ್‌ ಗಳಲ್ಲಿ 111 ರನ್ ಸಿಡಿಸಿದ ಆತನ ಅದ್ಭುತ ಇನ್ನಿಂಗ್ಸ್‌ ನೋಡು” ಎಂದು ಹೇಳಿದೆ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
“ಮರುದಿನ ಆತನ ಇನ್ನಿಂಗ್ಸ್‌ನ ಅನ್ನು ಮತ್ತೊಮ್ಮೆ ನೋಡಿದೆ. ಮುಜುಗರ ಬಿಟ್ಟು ಹೇಳುವುದಾದರೆ ಅವನು ನಮ್ಮೆಲ್ಲರಿಗಿಂತ ಅತ್ಯುತ್ತಮ ಆಟಗಾರ. ನಮ್ಮಲ್ಲಿ ಯಾರೂ ಸಹ ಆತನ ಆಟದ ವೈಭವಕ್ಕೆ ಹತ್ತಿರವೂ ಆಗುವು ದಿಲ್ಲ” ಎಂದು ಮ್ಯಾಕ್ಸ್‌ ವೆಲ್‌ ಬಣ್ಣಿಸಿದ್ದಾರೆ.
ಭವಿಷ್ಯದಲ್ಲಿ ಸೂರ್ಯಕುಮಾರ್ ಬಿಗ್ ಬ್ಯಾಷ್ ಲೀಗ್ ಒಪ್ಪಂದವನ್ನು ಪಡೆಯಬಹುದೇ ಎಂಬ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಮ್ಯಾಕ್ಸ್‌ವೆಲ್, “ಇಲ್ಲ ಅವರನ್ನು ಕೊಳ್ಳಲು ನಮ್ಮಲ್ಲಿ ಸಾಕಷ್ಟು ಹಣವಿಲ್ಲ. ಬಹುಷಃ ಆತನನ್ನು ಆಡಿಸಬೇಕಾದರೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಯೊಬ್ಬ ಆಟಗಾರನ ಹಣವನ್ನು ಸೂರ್ಯನೊಬ್ಬನಿಗೆ ನೀಡಿ ಖರೀದಿಸಬೇಕೇನೋ ಎಂದು ಮ್ಯಾಕ್ಸಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!