April 17, 2026
Friday, April 17, 2026
spot_img

ನಾವು ಯಾರನ್ನೂ ನಿಂದಿಸಿ, ಶಾಂತವಾಗಿಯೇ ಮಾತನಾಡಿದ್ದೆ: ರಿಜಿಜು ಆರೋಪಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯ ಸ್ಪೀಕರ್ ಕೊಠಡಿಯಲ್ಲಿ ಕಾಂಗ್ರೆಸ್ ಸಂಸದರ ಮಾತಿಗೆ ತಾನು ಪ್ರಚೋದಿಸಿದ್ದೇನೆ ಎಂಬ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಆರೋಪವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ತಳ್ಳಿಹಾಕಿದ್ದಾರೆ. ‘ನಾವು ಯಾರನ್ನೂ ನಿಂದಿಸಿಲ್ಲ, ನಾನು ಶಾಂತವಾಗಿಯೇ ಮಾತನಾಡಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಲ್ಲಿ 1-2 ಸಂಸದರು ಆಕ್ರೋಶಗೊಂಡಿದ್ದರು, ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಆದ್ರೆ ನಾನು ಅವರನ್ನು ಪ್ರೋತ್ಸಾಹಿಸುತ್ತಿದ್ದೆ ಎಂದು ಅವರು ಹೇಳಿದ್ದು ಶುದ್ಧ ಸುಳ್ಳು. ನಾನು ಸುಮ್ಮನೆ ಕುಳಿತಿದ್ದೆ. ಕೊನೆಯಲ್ಲಿ, ನಾನು ಶಾಂತವಾಗಿ ಕೆಲವು ಮಾತುಗಳನ್ನಾಡಿದೆ ಎಂದು ತಿಳಿಸಿದರು.

ಇದೇ ವೇಳೆ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತನಾಡಿದ ಅವರು, ಈ ಒಪ್ಪಂದದಿಂದ ರೈತರಿಗೆ ದೊಡ್ಡ ನಷ್ಟವನ್ನುಂಟುಮಾಡಲಿದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !