June 6, 2026
Saturday, June 6, 2026
spot_img

‘ವಿ ದಿ ಲೀಡರ್’ಗೆ ಜನಸಾಗರ: 24 ಗಂಟೆಯಲ್ಲಿ 14 ಲಕ್ಷ ಜನರ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ತೊರೆದ ಬಳಿಕ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಘೋಷಿಸಿದ ಹೊಸ ರಾಜಕೀಯ ಚಳುವಳಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

“ಅಣ್ಣಾಮಲೈ ಮಕ್ಕಳ್ ಇಯಕ್ಕಮ್” ಹಾಗೂ “We The Leader” ಹೆಸರಿನಲ್ಲಿ ಆರಂಭಗೊಂಡಿರುವ ಈ ಉಪಕ್ರಮಕ್ಕೆ ಕೇವಲ ಒಂದು ದಿನದಲ್ಲೇ ಸುಮಾರು 14 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಜನಸಾಮಾನ್ಯರ ರಾಜಕೀಯಕ್ಕೆ ಅಣ್ಣಾಮಲೈ ಕರೆ

ತಮ್ಮ ಮುಂದಿನ ರಾಜಕೀಯ ಪಯಣವನ್ನು ಜನರೊಂದಿಗೆ ಕಟ್ಟಿಕೊಳ್ಳಲು ಬಯಸುತ್ತಿರುವುದಾಗಿ ಅಣ್ಣಾಮಲೈ ಹೇಳಿದ್ದಾರೆ. ಯುವಕರು, ಸಾಮಾನ್ಯ ನಾಗರಿಕರು ಹಾಗೂ ಹೊಸ ತಲೆಮಾರಿನ ನಾಯಕರು ಈ ಚಳುವಳಿಯ ಭಾಗವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ. ರಾಜಕೀಯ ಕೆಲವರ ಸ್ವತ್ತಾಗಬಾರದು ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.

ಇದನ್ನೂ ಓದಿ:

ತಳಮಟ್ಟದಿಂದ ನಾಯಕತ್ವ ಬೆಳೆಸುವ ಯೋಜನೆ

ಹೊಸ ಸಂಘಟನೆ ಶಿಕ್ಷಣ, ಆರೋಗ್ಯ, ಪರಿಸರ ಹಾಗೂ ಯುವ ನಾಯಕತ್ವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಕರಿಗೆ ಅವಕಾಶ ಕಲ್ಪಿಸಲಿದೆ. ಸ್ಥಳೀಯ ಮಟ್ಟದಿಂದ ಬದಲಾವಣೆ ಆರಂಭಿಸಿ ಸಮಾಜದಲ್ಲಿ ಹೊಸ ಮಾದರಿ ನಿರ್ಮಿಸುವುದು ಸಂಘಟನೆಯ ಉದ್ದೇಶ ಎಂದು ತಿಳಿಸಲಾಗಿದೆ.

ಮುಂದಿನ ಗುರಿ ಲೋಕಸಭೆ ಚುನಾವಣೆ

ತಮಿಳುನಾಡಿನಲ್ಲಿ ನಡೆಯಲಿರುವ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮ್ಮ ತಂಡ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ಭವಿಷ್ಯದ ನಾಯಕರನ್ನು ರೂಪಿಸುವ ಮೂಲಕ ಪರ್ಯಾಯ ರಾಜಕೀಯ ವ್ಯವಸ್ಥೆ ನಿರ್ಮಿಸುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !