Saturday, April 1, 2023

Latest Posts

VIRAL PHOTO|ಇದೇನು ಅತ್ಯಾಧುನಿಕ ವಂದೇ ಭಾರತ್ ರೈಲೋ? ಅಥವಾ ಕಸದ ಬುಟ್ಟಿಯೋ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸರ್ಕಾರ ಪರಿಚಯಿಸಿರುವ ಅತ್ಯಾಧುನಿಕ ವಂದೇ ಭಾರತ್ ರೈಲು ಇದೀಗ ಕಸದ ಬುಟ್ಟಿಯಾಗಿ ಪರಿವರ್ತಿಸಿದೆ. ವಂದೇ ಭಾರತ್ ರೈಲಿನಲ್ಲಿ ಹೆಚ್ಚಿನ ಪ್ರಮಾಣದ ಕಸವನ್ನು ನೋಡಿ ಶಾಕ್‌ ಅಲ್ಲದೆ ಮತ್ತಿತ್ತೇನಾಗುತ್ತದೆ? ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಫೋಟೋವನ್ನು ಐಎಎಸ್ ಅಧಿಕಾರಿ ಅವನೀಶ್ ಸರಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ವಚ್ಛತೆ ಕಾಪಾಡಬೇಕಾದ ಈ ಅತ್ಯಾಧುನಿಕ ರೈಲಿನಲ್ಲಿ ಪ್ರಯಾಣಿಕರು ಎಸೆದ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಹಾರದ ಕವರ್‌ಗಳನ್ನು ತಿಂದು ಎಸೆದಿದ್ದಾರೆ. ಅವನ್ನೆಲ್ಲ ರೈಲ್ವೇ ಸಿಬ್ಬಂದಿ ಸ್ವಚ್ಛಗೊಳಿಸುತ್ತಿರುವುದನ್ನು ನಾವು ಈ ಫೋಟೋದಲ್ಲಿ ನೋಡಬಹುದು.

ವಂದೇ ಭಾರತ್ ರೈಲನ್ನು ಕಸದ ರಾಶಿಗೆ ಹಾಕಿರುವ ಪ್ರಯಾಣಿಕರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ನಮ್ಮ ದೇಶದ ಜನರಿಗೆ ಅವರ ಜವಾಬ್ದಾರಿ ಏನು ಎಂಬುದು ತಿಳಿದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಇಷ್ಟೊಂದು ನಿರ್ಲಕ್ಷ್ಯದಿಂದ ವರ್ತಿಸುತ್ತಿರುವ ಜನರಿಗೆ ಇಂತಹ ಅತ್ಯಾಧುನಿಕ ರೈಲಿನ ಬಗ್ಗೆ ತಿಳಿದಿರಲಿಕ್ಕಿಲ್ಲ ಎಂಬ ಟೀಕೆಗಳು ಹರಿದಾಡುತ್ತಿವೆ. ಭಾರತದಲ್ಲಿ 400 ಭಾರತೀಯ ರೈಲುಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿದ್ದು ಗೊತ್ತೇ ಇದೆ.

ಮೂರು ವರ್ಷಗಳಲ್ಲಿ ಈ ಅತ್ಯಾಧುನಿಕ ರೈಲುಗಳನ್ನು ತಯಾರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆ ಘೋಷಣೆಯಾಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಹಲವು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!