ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮೆಲ್ಬೋರ್ನ್ ನಲ್ಲಿ ತಮಿಳುನಾಡು ಹುಡುಗಿ ವಿನಿ ರಾಮನ್ ಜೊತೆಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹಿಂದಿನ ವಾರ ಅವರು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು.
Glenn Maxwell's marriage with Vini Raman,yesterday in Melbourne & that south Indian music😍 pic.twitter.com/8hmqma8MXv
— [email protected]_here(New Account)🇮🇳 (@PS_bhartiya) March 31, 2022
ಮದುವೆಯಲ್ಲಿ ಭಾರತೀಯ ಸಂಪ್ರದಾಯ, ಪದ್ದತಿಗಳು ಕಾಣುತ್ತಿದ್ದವು. ವರ ಮ್ಯಾಕ್ಸಿ ಶೇರ್ವಾನಿ ವಸ್ತ್ರ, ವಧು ವಿನಿ ಸೀರೆಯಲ್ಲಿ ಮಿಂಚುತ್ತಿದ್ದರು. ಮದುವೆ ಹಾರ ಹಿಡಿದ ಮ್ಯಾಕ್ಸಿ ದಕ್ಷಿಣ ಭಾರತದ ವಾದ್ಯಗೋಷ್ಠಿಗೆ ಹೆಜ್ಜೆಹಾಕಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ೨೦೨೦ ರಲ್ಲಿ ನಡೆದಿದ್ದ ಅವರ ವಿವಾಹ ನಿಶ್ಚಿತಾರ್ಥವೂ ಹಿಂದೂ- ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳ ಪ್ರಕಾರ ನಡೆದಿತ್ತು.