ನಮ್ಮದು ಇಸ್ಲಾಮಿಕ್ ದೇಶ, ಹುಡುಗಿಯರು ಶಾರ್ಟ್ಸ್ ಧರಿಸಿ ಆಡುವುದು ಸರಿಯೇ? ಪತ್ರಕರ್ತನ ಪ್ರಶ್ನೆಗೆ ಶಾಕ್‌ ಆದ ಪಾಕ್‌ ಫುಟ್ಬಾಲ್‌ ತಂಡ, ನೆಟ್ಟಿಗರ ಛೀಮಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೇಪಾಳದ ಕಠ್ಮಂಡುವಿನಲ್ಲಿ ನಡೆದ SAFF ಚಾಂಪಿಯನ್‌ಶಿಪ್‌ನಲ್ಲಿ ಪಾಕಿಸ್ತಾನದ ಮಹಿಳಾ ಫುಟ್‌ಬಾಲ್ ತಂಡ ಇತಿಹಾಸವನ್ನು ಸೃಷ್ಟಿಸಿದೆ. ಮಾಲ್ಡೀವ್ಸ್ ಅನ್ನು ಸೋಲಿಸುವ  ಮೂಲಕ ಪಂದ್ಯಾವಳಿಯಲ್ಲಿ ಎಂಟು ವರ್ಷಗಳ ಬಳಿಕ ತಮ್ಮ ಮೊದಲ ಜಯವನ್ನು ದಾಖಲಿಸಿದ್ದಾರೆ. ಅವರ ಗೆಲುವಿಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಆದರೆ, ತಂಡದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ಇಸ್ಲಾಮಿಕ್‌ ಮನಸ್ಥಿತಿಯ ಪ್ರಶ್ನೆ ಕೇಳಿ ಆಟಗಾರ್ತಿಯರಿಗೆ ಮುಜುಗರ ತಂದಿದ್ದಾರೆ. ಪತ್ರಕರ್ತರ ಪ್ರಶ್ನೆಯು ಆಟಗಾರ್ತಿಯರಿಗೆ ಅಗೌರವದಂತಿತ್ತು. ಆತನ ಪ್ರಶ್ನೆಯು ಮಹಿಳಾ ಫುಟ್ಬಾಲ್ ಆಟಗಾರ್ತಿಯರ ಉಡುಪುಗಳ ಕಡೆಗೆ ನಿರ್ದೇಶಿಸಲ್ಪಟ್ಟಿತು.
ʼಪಾಕಿಸ್ತಾನವು ಇಸ್ಲಾಮಿಕ್ ದೇಶವಾಗಿದೆ. ಆದರೆ ಪಾಕಿಸ್ತಾನವನ್ನು ಪ್ರತಿನಿಧಿಸುವ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ಶಾರ್ಟ್ಸ್ ಧರಿಸಿ ಆಡುತ್ತಿದ್ದಾರೆ. ನಮ್ಮ ದೇಶದ ಆಟಗಾರ್ತಿಯರು ಧಾರ್ಮಿಕ ಪ್ರೋಟೋಕಾಲ್‌ ಗಳಿಗೆ ವಿರುದ್ಧವಾದ ಶಾರ್ಟ್‌ ಧರಿಸಿ ಆಡಲು ಅನುಮತಿ ನೀಡಿದವರ್ಯಾರು. ಅವರು ಕನಿಷ್ಠಪಕ್ಷ ಲೆಗಿನ್ಸ್‌ ಧರಿಸಿ ಆದರೂ ಆಡಬೇಕಿತ್ತು ಎಂದು ಪತ್ರಕರ್ತ ಪ್ರಶ್ನಿಸಿದ್ದಾನೆ.
ಈ ಪ್ರಶ್ನೆಯು ಜನರನ್ನು ಕೆರಳಿಸಿದೆ. ಪಾಕಿಸ್ತಾನದ ಮಹಿಳಾ ಫುಟ್ಬಾಲ್ ತಂಡದ ಮುಖ್ಯ ಕೋಚ್ ಅದೀಲ್ ರಿಜ್ಕಿ ಸಹ ಈ ಪ್ರಶ್ನೆಯನ್ನು ಕೇಳಿ ಆಘಾತಕ್ಕೊಳಗಾಗಿದ್ದಾರೆ. ನಂತರ ಅವರು ಪ್ರಶ್ನೆಗೆ ಉತ್ತರಿಸಿದ ಅವರು, ಆಟಗಾರ್ತಿಯರ ಬಟ್ಟೆಯ ಆಯ್ಕೆಯನ್ನು ಆಡಳಿತ ಮಂಡಳಿಯು ಎಂದಿಗೂ ನಿಯಂತ್ರಿಸುವುದಿಲ್ಲ ಎಂದು ಹೇಳಿದರು.

“ನಾವು ಇಸ್ಲಾಮಿಕ್ ರಾಷ್ಟ್ರ ಮತ್ತು ನಮ್ಮ ಮೌಲ್ಯಗಳು ತುಂಬಾ ಪ್ರಬಲವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಂತರ ಕ್ರೀಡೆಯಲ್ಲಿ ಪ್ರಗತಿಪರರಾಗಿರುವುದು ಬಹಳ ಮುಖ್ಯ. ನಾವು ಈ ರೀತಿಯ ಕಾಮೆಂಟ್‌ಗಳನ್ನು ಎದುರಿಸಬೇಕು ಮತ್ತು ಟೀಕಿಸಬೇಕು ಏಕೆಂದರೆ ಅಂತಹ ಅಭಿಪ್ರಾಯಗಳು ಕ್ರೀಡೆಯಲ್ಲಿ ಮಾತ್ರವಲ್ಲದೆ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರನ್ನು ಹೀನಾಯವಾಗಿ ಕಾಣುವಂತಹದ್ದಾಗಿದೆ. ಮಹಿಳೆಯರು ತಮ್ಮ ಸಮವಸ್ತ್ರವನ್ನು ಆಯ್ಕೆ ಮಾಡಲು ಎಲ್ಲಾ ಹಕ್ಕನ್ನು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ಧಾರ್ಮಿಕ ಪ್ರೋಟೋಕಾಲ್ಗಳನ್ನು ಅನುಸರಿಸಲು ಬಯಸುತ್ತಾರೆ, ಕ್ರೀಡಾ ಸಂಸ್ಥೆಗಳ ಅನುಮೋದನೆ ಮೇರೆಗೆ ಅವರು ಹಿಜಾಬ್, ಪೇಟ ಇತ್ಯಾದಿಗಳನ್ನು ಧರಿಸಿ ಆಡುತ್ತಾರೆ. ಆದರೆ ಇದನ್ನು ಎಲ್ಲಾ ಕ್ರೀಡೆಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ನಾವು ಬಟ್ಟೆಯನ್ನು ನಿಯಂತ್ರಿಸುವುದಿಲ್ಲ, ತಾವು ಧರಿಸುವುದನ್ನು ಆಯ್ಕೆ ಮಾಡಲು ವ್ಯಕ್ತಿಗೆ ಸಂಪೂರ್ಣ ಹಕ್ಕಿದೆ ಮತ್ತು ಪಾಕಿಸ್ತಾನದ ಫುಟ್ಬಾಲ್ ಸಂಸ್ಥೆಯು ಈ ವಿಚಾರವಾಗಿ ಸ್ಪಷ್ಟತೆಯನ್ನು ಹೊಂದಿದೆʼ ಎಂದು ಅದೀಲ್ ರಿಜ್ಕಿ ಉತ್ತರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಲೇ  ನೆಟ್ಟಿಗರು ಪಾಕ್‌ ಪತ್ರಕರ್ತನ ಕೊಳಕು ಮನಸ್ಥಿತಿಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಪಾಕ್‌ ಮಹಿಳಾ ತಂಡದ ಸಾಧನೆಗಳ ಬಗ್ಗೆ ಹೇಳುವುದನ್ನು ಬಿಟ್ಟು ಮಹಿಳೆಯರ ಉಡುಪಿನ ಬಗ್ಗೆ ಕೆಂಗಣ್ಣು ಬೀರಿದ ಪತ್ರಕರ್ತನ ವಿರುದ್ಧ ಹರಿಹಾಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!