ಶಾಕ್ ನೀಡಿರುವ ಒಮಿಕ್ರಾನ್ ಬಿಎಫ್.7: ಏನಿದು?? ಯಾಕಿದಕ್ಕೆ ಇಷ್ಟು ಆತಂಕ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಎಲ್ಲೆಡೆ ಕೊರೋನಾ ಪ್ರಕರಣಗಳು ತಟಸ್ಥ ರೀತಿಯಲ್ಲಿ ಇದ್ದರೆ, ಚೀನಾದಲ್ಲಿ ಮಾತ್ರ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಭಾರತದಲ್ಲಿ ಈ ರೂಪಾಂತರಿಯ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ಕೊರೋನಾ ಗೈಡ್‌ಲೈನ್ಸ್ ಪಾಲಿಸಲು ಸೂಚನೆ ನೀಡಿದ್ದಾರೆ. ಕೊರೋನಾ ಮುಗಿದಿಲ್ಲ, ಎಲ್ಲ ಸನ್ನಿವೇಶಗಳಿಗೂ ತಯಾರಿ ನಡೆದಿದೆ ಎಂದಿದ್ದಾರೆ.

ಕೊರೋನಾ ಆರಂಭವಾದಾಗಿನಿಂದ ಇಲ್ಲಿಯವರೆಗೆ ಅನೇಕ ರೂಪಾಂತರಿಗಳು ಬಂದಿವೆ. ಅದರಲ್ಲಿ ಒಮಿಕ್ರಾನ್ ಕೂಡ ಒಂದು. ಇದರಲ್ಲಿ ಸಾಕಷ್ಟು ಉಪರೂಪಗಳಿವೆ. ಬಿಎ.5.3.1.7. ಎಂದು ಕರೆಯುವ ಸಬ್‌ವೇರಿಯಟ್‌ನನ್ನು ಬಿಎಫ್.7 ಎಂದು ಕರೆಯಲಾಗುತ್ತದೆ. ಇದು ಇತರೆ ರೂಪಾಂತರಿಗಳಿಗಿಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.

ಒಮಿಕ್ರಾನ್ ಬಿಎಫ್.7 ರೂಪಾಂತರ ಹೆಚ್ಚಾಗಿದೆ, ಭಾರತದಲ್ಲಿಯೂ ಈ ರೂಪಾಂತರಿ ಕಾಣಿಸಿದ್ದು, ಈ ತಳಿಯ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ..

ಲಕ್ಷಣಗಳೇನು?
ಮುಖ್ಯವಾಗಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಈ ತಳಿ ಹೆಚ್ಚು ಪರಿಣಾಮ ಬೀರುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಇರುವವರು ಕೊರೋನಾ ಬಗ್ಗೆ ಎಚ್ಚರ ವಹಿಸಬೇಕಿದೆ. ಜ್ವರ, ಕೆಮ್ಮು, ಗಂಟಲು ಕೆರೆತ, ಶೀತ, ಸುಸ್ತು, ವಾಂತಿ-ಬೇಧಿ ಸಮಸ್ಯೆಗಳು ಬಾಧಿಸುತ್ತವೆ.

ತಡೆಗಟ್ಟುವುದು ಹೇಗೆ?
ಕೊರೋನಾ ಇರಲಿ ಬಿಡಲಿ ಮಾಸ್ಕ್ ಧರಿಸುವುದನ್ನು ನಿಲ್ಲಿಸಬೇಡಿ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರಲಿ. ಭಾರತದ ಈಗಿನ ವಾತಾವರಣದಲ್ಲಿ ಶೀತ, ಜ್ವರ,ಕೆಮ್ಮು ಸಾಮಾನ್ಯ. ಕೊರೋನಾ ಜೊತೆ ಅದನ್ನು ತಪ್ಪು ತಿಳಿಯದೇ ವೈದ್ಯರ ಬಳಿ ತೆರಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!