ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ 11ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು, ಸೆಪ್ಟೆಂಬರ್ 29ರಂದ ಕಿಚ್ಚ ಸುದೀಪ್ ನೇತೃತ್ವದಲ್ಲಿ ಶುರುವಾಗಲಿದೆ.
ಇಂದು ನಡೆದ ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ಸುದೀಪ್, ಇಂಟರೆಸ್ಟಿಂಗ್ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ 10 ಸೀಸನ್ ಮುಗಿಸಿ 11ನೇ (ಸೀಸನ್‌ಗೆ ಲಗ್ಗೆ ಇಡುತ್ತಿರುವ ಕಾರ್ಯಕ್ರಮಕ್ಕೆ ಸುದೀಪ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು? ಎಂಬುದರ ಬಗ್ಗೆ ನಟ ತಿಳಿಸಿದ್ದಾರೆ.
ನನ್ನ ತಟ್ಟೆ ಎಷ್ಟು ಅಗಲ ಇದೆಯೋ ನಾನಷ್ಟು ಊಟ ಮಾಡುತ್ತೇನೆ. ನನಗೆ ಯೋಗ್ಯತೆ ಎಷ್ಟು ಇದೆಯೋ ನಾನಷ್ಟೇ ದುಡಿಯೋದು ಎಂದಿದ್ದಾರೆ. ಇದು ನನ್ನ ಹೊಸ ಅಧ್ಯಾಯ ಎಂದು ಸುದೀಪ್ ನಕ್ಕಿದ್ದಾರೆ.
ಈ ಸೀಸನ್ ನಾನು ಮಾಡಲ್ಲ ಅಂತ ಹೇಳಿದ್ದು ಸಂಭಾವನೆ ಕಾರಣಕ್ಕೆ ಅಲ್ಲ. ನಾನು ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ. ನನಗೆ ತುಂಬಾ ಸುಸ್ತು ಆಗ್ತಾ ಇತ್ತು. ತುಂಬಾ ಟ್ರಾವೆಲ್ ಆಗುತ್ತಿತ್ತು. ಅದನ್ನು ನಾನು ತಂಡಕ್ಕೆ ತಿಳಿಸಿದ್ದೆ, ಆದರೆ ಅವರೇ ನಾನು ಈ ಶೋ ಮಾಡುವಂತೆ ಕೇಳಿಕೊಂಡರು. 10 ವರ್ಷ ಬಿಗ್ ಬಾಸ್‌ಗೆ ಕೆಲಸ ಮಾಡಿದ್ದೇನೆ. 28 ವರ್ಷ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದೀನಿ ಅಂದ್ಮೇಲೆ ಒಳ್ಳೆಯ ಸಂಭಾವನೆಯೇ ಪಡೆದುಕೊಳ್ಳುತ್ತಿರುತ್ತೇನೆ ಅಲ್ವಾ? ಎಂದು ನಗುತ್ತಾ ಸುದೀಪ್ ಉತ್ತರಿಸಿದ್ದಾರೆ. ಆದರೆ ಪಡೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ಮಾತ್ರ ಯಾವುದೇ ಮಾಹಿತಿ ಅವರು ಬಿಟ್ಟು ಕೊಟ್ಟಿಲ್ಲ.