ರೆಬೆಲ್‌ ಶಾಸಕರ ಅನರ್ಹತೆ ತಡೆ ಹಿಡಿದ ಸುಪ್ರಿಂ ಕೋರ್ಟ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಪ್ರಸ್ತುತ ಸುಪ್ರೀಂ ಕೋರ್ಟ್‌ ರೆಬೆಲ್‌ ಶಾಸಕರನ್ನು ಅನರ್ಹಗೊಳಿಸಿರುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದು ಡೆಪ್ಯುಟಿ ಸ್ಪೀಕರ್‌ ಅವರ ಕ್ರಮದ ಕುರಿತು ಸ್ಪಷ್ಟನೆ ನೀಡುವಂತೆ ನೋಟೀಸ್‌ ನೀಡಿದೆ.

ಮಹಾರಾಷ್ಟ್ರದ ಉಪಸಭಾಪತಿಗಳು ಏಕನಾಥ ಶಿಂಧೆ ಸೇರಿದಂತೆ ಒಟ್ಟು 16 ಮಂದಿ ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದರು. ಇದರ ವಿರುದ್ಧ ಶಿಂಧೆ ಮತ್ತು ಉಳಿದ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಿಚಾರಿಸಿದ ಸುಪ್ರೀಂ ಕೋರ್ಟ್ ನ ವಿಶೇಷ ರಜೆಯ ಪೀಠವು ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರ ವಿರುದ್ಧ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರು ನೀಡಿರುವ ಅನರ್ಹತೆ ನೋಟಿಸ್ ವಿರುದ್ಧ ಉಪ ಸ್ಪೀಕರ್, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ, ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಶಿವಸೇನೆ ಮುಖಂಡರಾದ ಅಜಯ್ ಚೌಧರಿ, ಸುನೀಲ್ ಪ್ರಭು ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಐದು ದಿನಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ. ಹಾಗೂ ಮುಂದಿನ ವಿಚಾರಣೆಯನ್ನು ಜುಲೈ 11 ರಂದು ನಡೆಸುವುದಾಗಿ ಹೇಳಿದೆ. ಅಲ್ಲಿಯವರೆಗೆ ಶಾಸಕರ ಅನರ್ಹತೆಯ ಆದೇಶವನ್ನು ತಡೆಹಿಡಿಯುವಂತೆ ಸೂಚಿಸಲಾಗಿದೆ. ಹಾಗೂ ಅನರ್ಹತೆಯ ನೋಟೀಸ್‌ ಗೆ ಉತ್ತರ ನೀಡಲು ಶಿಂಧೆ ಹಾಗೂ ಇತರ ಬಂಡಾಯ ಶಾಸಕರಿಗೆ ಹೆಚ್ಚಿನ ಕಾಲಾವಕಾಶ ನೀಡಿದೆ. ಈ ಹಿಂದೆ ಅವರು ಸೋಮವಾರ ಉತ್ತರ ನೀಡಬೇಕಿತ್ತು. ಈಗ ಅವರಿಗೆ ಜುಲೈ 11ರವರೆಗೆ ಕಾಲಾವಕಾಶ ನೀಡಲಾಗಿದೆ. ಅಲ್ಲದೇ ಬಂಡಾಯ ಶಾಸಕರಿಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!