Tuesday, May 30, 2023

Latest Posts

ಗಂಡನಿಂದ ಹೆಂಡತಿ ಏನನ್ನು ನಿರೀಕ್ಷೆ ಮಾಡ್ತಾಳೆ, ಆಕೆಗೆ ಬೇಕಿರೋದು ಇಷ್ಟೆ!

ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿ ಮಧ್ಯೆ ಸಾಕಷ್ಟು ಜಗಳಗಳು ಬರೋ ಸಾಧ್ಯತೆ ಇದೆ. ಆದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಂತೆ, ಜಗಳದ ಪ್ರಮಾಣ ಕಡಿಮೆಯಾಗುತ್ತದೆ. ಎಷ್ಟೇ ಪ್ರೀತಿಯಿಂದ ಇದ್ದರೂ ನೀವಿಬ್ಬರೂ ಬೇರೆ ಬೇರೆ ವ್ಯಕ್ತಿಗಳು, ಬೇರೆ ಬೇರೆ ಮನೆಯವರು, ಬೇರೆ ಬೇರೆ ರೀತಿ ಬಾಲ್ಯ ಹೊಂದಿದವರು, ಬೇರೆ ಬೇರೆ ಜೀವನ ಶೈಲಿ ಹೊಂದಿದವರು. ಎಷ್ಟೇ ಪ್ರಯತ್ನಿಸಿದರೂ ಹೆಂಡತಿಯನ್ನು ಅರ್ಥಮಾಡಿಕೊಳ್ಳೋದಕ್ಕೆ ಆಗೋದಿಲ್ಲ ಎನ್ನುವುದು ನಿಮ್ಮ ಭಾವನೆ..

ಆದರೆ ಹೆಂಡತಿ ನಿಮ್ಮಿಂದ ಏನನ್ನು ನಿರೀಕ್ಷೆ ಮಾಡ್ತಾಳೆ? ಇದನ್ನು ತಿಳಿಯೋದ್ರೊಳಗೆ ಅರ್ಧ ಜೀವನವೇ ಕಳೆದುಹೋಗುತ್ತದೆ. ಈ ನಿರೀಕ್ಷೆಗಳು ಒಂದೇ ರೀತಿ ಇರೋದಿಲ್ಲ. ಇಂದು ನನ್ನ ಗಂಡ ಅತ್ತೆ ಬದಲು ನನ್ನ ಪರ ವಹಿಸಬೇಕು ಎಂದು ಆಕೆ ನಿರೀಕ್ಷೆ ಮಾಡಿರಬಹುದು, ಆದರೆ ಇನ್ನೊಂದು ದಿನ ಅತ್ತೆ ಜೊತೆ ಜೋರು ಧ್ವನಿಯಲ್ಲಿ ಮಾತನಾಡಬೇಡಿ ಎಂದು ಆಕೆಯೇ ನಿಮಗೆ ಜೋರು ಮಾಡಬಹುದು.

ಮೊದಲು ಹೆಂಗಸರನ್ನು ಅರ್ಥಮಾಡಿಕೊಳ್ಳೋದು ಕಷ್ಟ ಎನ್ನುವ ಹಳೇ ಮಾತನ್ನು ಮನಸ್ಸಿನಿಂದ ತೆಗೆದು ಹಾಕಿ, ಯಾವ ಮಹಿಳೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಿಲ್ಲ. ನೀವು ಹೇಗೆ ಪ್ರಯತ್ನ ಮಾಡುತ್ತೀರೋ, ಅವರೂ ಹಾಗೆ ಪ್ರಯತ್ನದಲ್ಲಿ ಇರುತ್ತಾರೆ. ಗಂಡು ಹೆಣ್ಣು ಎನ್ನುವ ಬೇಧ ಬಿಟ್ಟು ನೀವಿಬ್ಬರೂ ವ್ಯಕ್ತಿಗಳು ಎಂದಷ್ಟೇ ಆಲೋಚಿಸಿ..

ಹೆಂಡತಿ ನಿಮ್ಮಿಂದ ಏನೇನು ನಿರೀಕ್ಷೆ ಮಾಡುತ್ತಾಳೆ ಗೊತ್ತಾ?

  • ಆಕೆ ದುಡಿಯುತ್ತಿಲ್ಲ ಎಂದಾದರೆ, ಅವಳಾಗೆ ಬಾಯ್ಬಿಟ್ಟು ನನಗೆ ಒಳಉಡುಪು ಖರೀದಿಸಲು ದುಡ್ಡು ಬೇಕು, ಪಾರ್ಲರ್‌ಗೆ ಹೋಗಲು ಹಣಬೇಕು ಎಂದು ಕೇಳುವ ಮೊದಲೇ ನೀವೇ ಆಕೆಗೆ ಸಪೋರ್ಟ್ ಮಾಡಿ.
  • ಆಕೆಯ ಆರೋಗ್ಯದ ಬಗ್ಗೆ ನೀವು ಆಲೋಚಿಸಬೇಕು ಆದರೆ ಅದಕ್ಕೂ ಮೊದಲು ನಿಮ್ಮ ಆರೋಗ್ಯ ನೀವು ಚೆನ್ನಾಗಿ ನೋಡಿಕೊಳ್ಳಲಿ ಎಂದು ಆಕೆ ನಿರೀಕ್ಷೆ ಮಾಡುತ್ತಾಳೆ.
  • ನೀವು ಹೇಗೆ ಕೆಲಸದಲ್ಲಿ ಮುಂದುವರಿಯೋದಕ್ಕೆ ಇಷ್ಟಪಡುತ್ತಿರೋ, ಆಕೆಗೂ ಅದು ಇಷ್ಟವಿರಬಹುದು. ಅದಕ್ಕೆ ನೀವು ಬೆಂಬಲ ನೀಡಲಿ ಎಂದು ಆಕೆ ನಿರೀಕ್ಷಿಸುತ್ತಾಳೆ.
  • ಹೊಗಳಿಕೆ ನಿಮಗೆ ಕಷ್ಟದ ಕೆಲಸ ಇರಬಹುದು. ಆದರೆ ನಿಮ್ಮ ಒಂದು ಹೊಗಳಿಕೆ ಆಕೆಯ ದಿನವನ್ನೇ ಬದಲಾಯಿಸುತ್ತದೆ.
  • ಫ್ಯಾಮಿಲಿ ಟ್ರಿಪ್, ಡಿನ್ನರ್ ಡೇಟ್ ಇವೆಲ್ಲವನ್ನು ಆಕೆ ಬಯಸುತ್ತಾಳೆ.
  • ನಿಮ್ಮ ತವರು ಮನೆಯನ್ನು ನೀವು ಹೇಗೆ ಪ್ರೀತಿಸುತ್ತೀರೋ ಅವರೂ ಅವರ ತವರ ಮನೆಯನ್ನು ಅಷ್ಟೇ ಪ್ರೀತಿಸುತ್ತಾರೆ. ಅವರ ಪ್ರೀತಿಗೂ ಬೆಲೆ ಕೊಡಿ.
  • ಸಂಬಂಧ ದೀರ್ಘಕಾಲ ಹಳಸದೇ ಇರಬೇಕೆಂದರೆ ಪರಸ್ಪರ ಗೌರವ ಇರಲೇಬೇಕು. ಬೇರೆಯವರ ಎದುರು ಅಷ್ಟೇ ಅಲ್ಲ, ನಿಮ್ಮ ಖಾಸಗಿ ಕೋಣೆಯಲ್ಲೂ ಆಕೆ ಗೌರವವನ್ನು ನಿರೀಕ್ಷಿಸುತ್ತಾಳೆ.
  • ಅವಳಿಗೆ ದುಬಾರಿ ಗಿಫ್ಟ್ ಬೇಡ, ನಿಮ್ಮ ಪ್ರೀತಿಯ ಸಮಯ ಬೇಕು. ಅವಳು ಬಟ್ಟೆ ಮಡಿಸುತ್ತಾ ಕೂತಾಗ, ಜೊತೆಗೆ ನೀವು ಕುಳಿತು ಆಫೀಸ್ ಕಥೆಗಳನ್ನು ಹೇಳಿದರೂ ಖುಷಿಯೇ!
  • ಬೇರೆಯವರ ಮುಂದೆ, ಬೇರೆ ವಿಷಯಗಳ ಮುಂದೆ ಆಕೆಗೆ ಮೊದಲ ಪ್ರಾಮುಖ್ಯತೆ ನೀಡಿ. ಇದನ್ನು ಆಕೆ ಖಂಡಿತಾ ನಿರೀಕ್ಷಿಸುತ್ತಾಳೆ.
  • ಆಕೆ ತನಗೆ ಸರ್‌ಪ್ರೈಸ್ ಇಷ್ಟ ಇಲ್ಲ ಎಂದು ಹೇಳಬಹುದು, ಆದರೆ ಗಂಡ ಕೊಡುವ ಸರ್‌ಪ್ರೈಸ್ ಬೇಡ ಎನ್ನೋಕೆ ಸಾಧ್ಯವಾ?
  • ಮಹಿಳೆಯರ ಇಲ್ಲ ಪದದಲ್ಲೇ ಎಲ್ಲಾ ಇದೆ. ಅವರು ಬೇಡ ಎಂದು ಹೇಳಿದರೂ ಅದರಲ್ಲಿ ಬೇಕು ಎನ್ನುವ ಅರ್ಥ ಇದೆ. ಇದನ್ನು ತಿಳಿಯಲು ಆಳಕ್ಕೆ ಇಳಿಯಿರಿ.
  • ತಪ್ಪು ಮಾಡಿದ್ದು ನಿಜವೇ ಆದರೆ ಆಕೆಯ ಮುಂದೆ ಶರಣಾಗಿ, ನಾನು ತಪ್ಪು ಮಾಡಿದ್ದೇನೆ ಎಂದು ಹಾನೆಸ್ಟ್ ಆಗಿ ಹೇಳಿ.
  • ಅವಳ ನಿರ್ಣಯಗಳನ್ನು ಅವಳು ತೆಗೆದುಕೊಳ್ಳಲು ಬಿಡಿ. ಸಲಹೆ ನೀಡಿ, ನಿರ್ಧಾರ ಹೇರಬೇಡಿ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!