ಡ್ಯಾನ್ಸ್‌ ಮಾಡಿದ್ರು, ಕೆಲಸ ಕಳೆದುಕೊಂಡ್ರು!: ದೇವಾಲಯಲ್ಲಿ ನೃತ್ಯ ಮಾಡಿದ್ದಕ್ಕೆ ಉದ್ಯೋಗಕ್ಕೆ ಕುತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪವಿತ್ರ ದೇವಾಲಯಗಳಲ್ಲಿ ಸಿನಿಮಾ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೆ, ಮಧ್ಯಪ್ರದೇಶದಲ್ಲಿ ಇಬ್ಬರು ಮಹಿಳೆಯರು ಪವಿತ್ರವಾದ ಮಹಾಕಾಳ ದೇವಸ್ಥಾನದಲ್ಲಿ ನೃತ್ಯ ಮಾಡಿದ್ದಾರೆ. ಅದೂ ಅಲ್ಲಿನ ಮಹಿಳಾ ಭದ್ರತಾ ಸಿಬ್ಬಂದಿ. ಇದಕ್ಕೆ ಸ್ಪಂದಿಸಿದ ದೇವಸ್ಥಾನದ ಅಧಿಕಾರಿಗಳು ಇಬ್ಬರನ್ನೂ ಅಮಾನತುಗೊಳಿಸಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಪ್ರಸಿದ್ಧ ಮಹಾಕಾಳ ದೇವಾಲಯವಿದೆ. ಇಲ್ಲಿ ಇಬ್ಬರು ಮಹಿಳೆಯರು ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಹೆಚ್ಚು ಭಕ್ತರಿಲ್ಲದ ಕಾರಣ ಹಾಗೂ ಖಾಲಿ ಇದ್ದುದರಿಂದ ದೇವಸ್ಥಾನದಲ್ಲಿಯೇ ವಿಡಿಯೋ ತೆಗೆಯಲು ಇಬ್ಬರೂ ಮುಂದಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಉದ್ದೇಶದಿಂದ ಬಾಲಿವುಡ್ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಲವು ಭಕ್ತರ ಆಕ್ರೋಶಕ್ಕೂ ಗುರಿಯಾಯಿತು. ಪುಣ್ಯ ಮಂದಿರದಲ್ಲಿ ಈ ರೀತಿ ಡ್ಯಾನ್ಸ್ ಮಾಡಿ ಏನು ಪ್ರಯೋಜನ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಟೀಕೆಗೆ ದೇವಸ್ಥಾನದ ಅಧಿಕಾರಿಗಳು ಉತ್ತರಿಸಿದರು.

ತಕ್ಷಣವೇ ಇಬ್ಬರು ಮಹಿಳೆಯರನ್ನು ಅವರ ಕರ್ತವ್ಯದಿಂದ ತೆಗೆದುಹಾಕುವಂತೆ ಆದೇಶ ಹೊರಡಿಸಲಾಯಿತು. ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತು ದೇವಸ್ಥಾನದ ಅಧಿಕಾರಿಗಳು ಒಳಗೆ ಮೊಬೈಲ್ ಫೋನ್, ಕ್ಯಾಮೆರಾ ತರದಂತೆ ನಿರ್ಬಂಧ ಹೇರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!