ಬುದ್ಧಿವಾದ ಹೇಳುವ ಶಿಕ್ಷಕರಿಗೇನೇ ನೀತಿ ಪಾಠ ಹೇಳಿದ ಚಿಣ್ಣರು , ಅಷ್ಟಕ್ಕೂ ಆಗಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲೆಯಲ್ಲಿ ಕಲಿಸುವ ಶಿಕ್ಷಕರನ್ನು ಮಕ್ಕಳು ಗೌರವಿಸುತ್ತಾರೆ. ಆದರೆ ಬುದ್ಧಿವಂತ ಶಿಕ್ಷಕರು ದಾರಿ ತಪ್ಪಿದಾಗ ಅವರನ್ನು ಸರಿಪಡಿಸುವವರು ಯಾರು? ಛತ್ತೀಸ್‌ಗಡ ಬಸ್ತರ್ ಜಿಲ್ಲೆಯಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲಾ ಮಕ್ಕಳು ತಪ್ಪು ದಾರಿ ಹಿಡಿದ ಶಿಕ್ಷಕರಿಗೆ ಸರಿಯಾದ ಪಾಠ ಕಲಿಸಿದ್ದಾರೆ.

ಬಸ್ತರ್ ಜಿಲ್ಲೆಯ ಈ ಶಿಕ್ಷಕ ಪ್ರತಿದಿನ ಕುಡಿದು ಶಾಲೆಗೆ ಬರುತ್ತಿದ್ದ. ಈತ ಕುಡುಕನಷ್ಟೇ ಅಲ್ಲ, ಶಾಲೆಯಲ್ಲಿ ಮಕ್ಕಳನ್ನೂ ತೀವ್ರವಾಗಿ ನಿಂದಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ, ಕೋಪಗೊಂಡ ಮಕ್ಕಳು ತಮ್ಮ ಕುಡುಕ ಶಿಕ್ಷಕನಿಗೆ ಬಿಸಿ ಮುಟ್ಟಿಸಿದ್ದಾರೆ.

ಕುಡಿದ ಅಮಲಿನಲ್ಲಿ ಶಿಕ್ಷಕ ಎಂದಿನಂತೆ ಬೈಕ್ ನಲ್ಲಿ ಶಾಲೆಗೆ ಬಂದಿದ್ದಾನೆ. ದಾರಿಯಲ್ಲಿ ಬರುತ್ತಿದ್ದ ಶಿಕ್ಷಕನಿಗೆ ಮಕ್ಕಳು ಕಲ್ಲು, ಚಪ್ಪಲಿಯಿಂದ ಹೊಡೆದಿದ್ದಾರೆ. ಛತ್ತೀಸ್‌ಗಡ ಶಾಲೆಯ ಮಕ್ಕಳ ಈ ಆಕ್ರೋಶದ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶಿಕ್ಷಕನಿಗೆ ಬುದ್ಧಿ ಕಲಿಸಿದ ಮಕ್ಕಳ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!