ಸಾಮಾನ್ಯವಾಗಿ ಆರೋಗ್ಯದ ಬಗ್ಗೆ, ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುವ ಜನರಿಗೆ ಯಾವ ಪದಾರ್ಥದಲ್ಲಿ ಯಾವ ಅಂಶವಿದೆ. ತೂಕ ಇಳಿಕೆಗೆ, ತೂಕ ಹೆಚ್ಚಳಕ್ಕೆ, ಆರೋಗ್ಯವಾಗಿರಲು, ಚರ್ಮದ ಕಾಳಜಿಗೆ, ಮೂಳೆಗಳ ಆರೋಗ್ಯಕ್ಕೆ ಯಾವೆಲ್ಲಾ ಪದಾರ್ಥಗಳನ್ನು ತಿನ್ನಬೇಕು ಎಂದು ತಿಳಿದಿರುತ್ತದೆ. ಆದರೆ ಎಲ್ಲರಿಗೂ ಈ ವಿಷಯ ಗೊತ್ತಿರೋದಿಲ್ಲ. ಏನು ತಿನ್ನಬೇಕು? ಏನು ತಿನ್ನಬಾರದು ಎಂದು ತಿಳಿಯದೇ ನಿತ್ಯ ಏನು ತಿನ್ನುತ್ತಾರೋ ಅದನ್ನು ತಿಂದುಕೊಂಡು ಮುನ್ನಡೆಯುತ್ತಾರೆ. ಯಾವ ತರಕಾರಿ ಅಥವಾ ಹಣ್ಣುಗಳು ದೇಹದ ಯಾವ ಅಂಗಗಳಿಗೆ ಉತ್ತಮ? ಇಲ್ಲಿದೆ ಮಾಹಿತಿ..
ಹಳದಿ ಬಣ್ಣದ ತರಕಾರಿ ಹಾಗೂ ಹಣ್ಣಿನಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬು, ಬಾಳೆಹಣ್ಣು, ಸ್ವೀಟ್ ಕಾರ್ನ್, ಬೆಲ್ ಪೆಪ್ಪರ್, ಪೈನಾಪಲ್ ಸೇವನೆ ಇಮ್ಯುನಿಟಿಗೆ ಉತ್ತಮ.
ಕಿತ್ತಳೆ ಬಣ್ಣದ ಹಣ್ಣು ಹಾಗೂ ತರಕಾರಿಗಳನ್ನು ಸೇವನೆ ಮಾಡುವುದರಿಂದ ದೃಷ್ಟಿ ಹಾಗೂ ಚರ್ಮಕ್ಕೆ ಉತ್ತಮವಾಗುತ್ತದೆ. ಕುಂಬಳಕಾಯಿ, ಮಸ್ಕ್ಮೆಲನ್, ಏಪ್ರಿಕಾಟ್, ಆರೆಂಜ್, ಕ್ಯಾರೆಟ್ ಹಾಗೂ ಸಿಹಿಗೆಣಸನ್ನು ತಿನ್ನಬಹುದು.
ಕೆಂಪು ಬಣ್ಣದ ಪದಾರ್ಥಗಳ ಸೇವನೆಯಿಂದ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ. ಸ್ಟ್ರಾಬೆರಿ, ಟೊಮ್ಯಾಟೊ, ಕ್ಯಾಪ್ಸಿಕಂ, ಕಲ್ಲಂಗಡಿ, ದಾಳಿಂಬೆ ಹಾಗೂ ಚೆರಿಗಳನ್ನು ಸೇವನೆ ಮಾಡಬಹುದು.
ಹಸಿರು ತರಕಾರಿಗಳು ಹಾಗೂ ಹಣ್ಣುಗಳು ದೇಹಕ್ಕೆ ವಿಟಮಿನ್ಸ್ ನೀಡಿ ಕೆಟ್ಟ ಅಂಶಗಳನ್ನು ಹೊರಕ್ಕೆ ಹಾಕುತ್ತವೆ. ಸೆಲ್ಗಳಿಗೆ ಉತ್ತಮ ಪೋಷಕಾಂಶ ನೀಡುತ್ತವೆ. ಮರಸೇಬು, ಸೊಪ್ಪು, ಬ್ರೊಕೊಲಿ, ಅವಕಾಡೊ, ಸೌತೆಕಾಯಿ, ಕಿವಿ ಉತ್ತಮವಾಗಿದೆ.
ನೀಲಿ ಬಣ್ಣದ ಆಹಾರ ಪದಾರ್ಥಗಳು ಮೆದುಳು ಹಾಗೂ ನೆನಪಿನ ಶಕ್ತಿಗೆ ಸಂಬಂಧಿಸಿದ್ದಾಗಿದೆ. ಬ್ಲೂಬೆರಿ, ದ್ರಾಕ್ಷಿ, ಬ್ಲಾಕ್ ಬೆರಿ ಸೇವನೆ ಮಾಡಬಹುದು.
ಪರ್ಪಲ್ ಬಣ್ಣದ ಹಣ್ಣು ತರಕಾರಿ ಸೇವನೆಯಿಂದ ಆಯಸ್ಸು ವೃದ್ಧಿಯಾಗುತ್ತದೆ. ಫಿಗ್, ದ್ರಾಕ್ಷಿ, ಬೀಟ್ರೂಟ್, ಬದನೆಕಾಯಿ, ಕೋಸು ಸೇವನೆ ಮಾಡಬಹುದು.
ಬಿಳಿ ಬಣ್ಣದ ಪದಾರ್ಥಗಳ ಸೇವನೆಯಿಂದ ರೋಗ ಬಾರದಂತೆ ತಡೆಯಬಹುದು. ಹೂಕೋಸು, ಬೆಳ್ಳುಳ್ಳಿ, ಮಶ್ರೂಮ್, ಕಾಯಿ, ಶುಂಠಿ, ಬಿಳಿ ಈರುಳ್ಳಿ ಉತ್ತಮವಾಗಿದೆ.



