ಏನನ್ನು ಸಾಧಿಸಲು ಹೊರಟಿದೆ ಚೀನಾ? ಭೂಮಿಯ 10 ಕಿಲೋಮೀಟರ್ ಆಳದವರೆಗೂ ರಂಧ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾ ಮತ್ತೊಂದು ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಭೂಮಿಯ ಹುಟ್ಟು ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ತಿಳಿಯಲು ಭೂಮಿಯೊಳಗೆ 10 ಕಿ.ಮೀ ಆಳದವರೆಗೂ ರಂಧ್ರ ಕೊರೆಸಲಾಗುತ್ತಿದೆ.

ಭೂಮಿಯೊಳಗಿನ ಸ್ಥಿತಿಗತಿಗಳ ಸಂಶೋಧನೆಗಾಗಿ ಚೀನಾ ಈ ಯೋಜನೆಯನ್ನು ಆರಂಭಿಸಿದೆಯಂತೆ. ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದ ತಾರಿಮ್ ಜಲಾನಯನ ಪ್ರದೇಶದಲ್ಲಿ ಈ ಕೊಳವೆ ಬಾವಿಯನ್ನು ಕೊರೆಯಲಾಗುತ್ತಿದೆ.

ಈ ಬೋರ್ ವೆಲ್ ಭೂಮಿಯ ಒಳಗಿನ 10 ಕಲ್ಲಿನ ಪದರಗಳ ಮೂಲಕ ನುಸುಳುತ್ತದೆ. ಭೂಮಿಯ ಹುಟ್ಟು, ಕಾಲದ ಬದಲಾವಣೆ, ಜೈವಿಕ ವಿಕಸನ, ಹಿಂದಿನ ಭೂಕಂಪಗಳು, ಜ್ವಾಲಾಮುಖಿ ಸ್ಫೋಟ ಮತ್ತು ಹವಾಮಾನ ಬದಲಾವಣೆಯನ್ನು ತಿಳಿಯಲು ಈ ಯೋಜನೆ ನೆರವಾಗಲಿದೆ ಅಂತಿದಾರೆ ಅಲ್ಲಿನ ವಿಜ್ಞಾನಿಗಳು. ಭೂಮಿಯ ಆಳದಲ್ಲಿನ ಹೊಸ ವಿಷಯಗಳನ್ನು ಅನ್ವೇಷಿಸುವ ದಿಟ್ಟ ನಿರ್ಧಾರ ಇದಾಗಿದೆ ಎಂದು ಯೋಜನೆಯ ತಾಂತ್ರಿಕ ತಜ್ಞ ವಾಂಗ್ ಚುನ್ ಶೆಂಗ್ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!