May 27, 2026
Wednesday, May 27, 2026
spot_img

ಡಿಫೆನ್ಸೀವ್ ಥಿಂಕಿಂಗ್ ಅಂದರೇನು? ನಿಮ್ಮ ಈ ಒಂದು ಸಣ್ಣ ಹವ್ಯಾಸ ಇಡೀ ಜೀವನವನ್ನೇ ಹಾಳು ಮಾಡಬಹುದು, ಎಚ್ಚರ!

ಯಾರಾದರೂ ನಮಗೆ ಒಂದು ಸಣ್ಣ ಸಲಹೆ ಕೊಟ್ಟರೆ ಅಥವಾ ನಮ್ಮ ತಪ್ಪನ್ನು ಎತ್ತಿ ತೋರಿಸಿದರೆ ನಮಗೆ ತಕ್ಷಣ ಕೋಪ ಬರುತ್ತದೆ, ಇಲ್ಲವೇ ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ನೂರು ಕಾರಣಗಳನ್ನು ಹುಡುಕುತ್ತೇವೆ. ಮಾನಸಿಕ ಆರೋಗ್ಯದ ಭಾಷೆಯಲ್ಲಿ ಇದನ್ನು ‘ಡಿಫೆನ್ಸೀವ್ ಥಿಂಕಿಂಗ್’ (Defensive Thinking) ಎಂದು ಕರೆಯಲಾಗುತ್ತದೆ. ಈ ಅಭ್ಯಾಸವು ನಮ್ಮ ವ್ಯಕ್ತಿತ್ವವನ್ನು ಕುಗ್ಗಿಸುವುದಲ್ಲದೆ, ನಮ್ಮ ಸಂಬಂಧಗಳನ್ನು ಮತ್ತು ವೃತ್ತಿಜೀವನವನ್ನು ಹಾಳು ಮಾಡುತ್ತದೆ. ಹಾಗಾದರೆ, ಈ ಡಿಫೆನ್ಸೀವ್ ಥಿಂಕಿಂಗ್ ಎಂದರೇನು ಮತ್ತು ಇದನ್ನು ತಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ.

ಡಿಫೆನ್ಸೀವ್ ಥಿಂಕಿಂಗ್ ಎಂದರೇನು?
ಸರಳವಾಗಿ ಹೇಳುವುದಾದರೆ, ಯಾವುದೇ ಟೀಕೆ, ಸಲಹೆ ಅಥವಾ ಪರಿಸ್ಥಿತಿಯನ್ನು ನೇರವಾಗಿ ಎದುರಿಸುವ ಬದಲು, ನಮ್ಮ ಅಹಂಕಾರ ಅಥವಾ ಸ್ವಾಭಿಮಾನಕ್ಕೆ ದಕ್ಕೆ ಬಾರದಂತೆ ತಡೆಯಲು ನಮ್ಮ ಮನಸ್ಸು ತಕ್ಷಣವೇ ರಕ್ಷಣಾತ್ಮಕ ಗೋಡೆಯನ್ನು ನಿರ್ಮಿಸಿಕೊಳ್ಳುವುದೇ ಡಿಫೆನ್ಸೀವ್ ಥಿಂಕಿಂಗ್.

ಡಿಫೆನ್ಸೀವ್ ಥಿಂಕಿಂಗ್ ಅನ್ನು ನಿಲ್ಲಿಸುವುದು ಹೇಗೆ?
ತಕ್ಷಣ ಪ್ರತಿಕ್ರಿಯಿಸಬಾರದು:
ಯಾರಾದರೂ ನಿಮ್ಮ ತಪ್ಪುಗಳನ್ನು ಹೇಳಿದಾಗ ತಕ್ಷಣವೇ ವಾದ ಮಾಡಲು ಹೋಗಬೇಬಾರದು. ಕನಿಷ್ಠ 5 ಸೆಕೆಂಡುಗಳ ಕಾಲ ನಿಶ್ಶಬ್ದವಾಗಿದ್ದು, ಒಂದು ದೀರ್ಘ ಉಸಿರು ತಗೆದುಕೊಳ್ಳಬೇಕು. ಇದು ನಿಮ್ಮ ಮೆದುಳಿಗೆ ಪರಿಸ್ಥಿತಿಯನ್ನು ತಾರ್ಕಿಕವಾಗಿ ಯೋಚಿಸಲು ಸಮಯ ನೀಡುತ್ತದೆ ಮತ್ತು ಕೋಪದ ಭರದಲ್ಲಿ ಮಾತನಾಡುವುದನ್ನು ತಪ್ಪಿಸುತ್ತದೆ.

ಟೀಕೆಗಳನ್ನು ಸಲಹೆಗಳಾಗಿ ಸ್ವೀಕರಿಸಬೇಕು:
ಸಾಮಾನ್ಯವಾಗಿ ಡಿಫೆನ್ಸೀವ್ ಜನರು ಟೀಕೆಗಳನ್ನು ಅವಮಾನ ಎಂದು ಭಾವಿಸುತ್ತಾರೆ. ಅದರ ಬದಲು, ಈ ಸಲಹೆಯಿಂದ ನಾನು ನನ್ನನ್ನು ಹೇಗೆ ಸುಧಾರಿಸಿಕೊಳ್ಳಬಹುದು? ಎಂದು ಯೋಚಿಸಬೇಕು. ಎದುರಿಗಿರುವ ವ್ಯಕ್ತಿ ನಿಮ್ಮ ಒಳ್ಳೆಯದಕ್ಕಾಗಿ ಹೇಳುತ್ತಿದ್ದಾನೆಯೇ ಹೊರತು ನಿಮ್ಮನ್ನು ದ್ವೇಷಿಸುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು:
ತಪ್ಪು ಮಾಡುವುದು ಮನುಷ್ಯ ಸಹಜ ಗುಣ. ತಪ್ಪನ್ನು ಒಪ್ಪಿಕೊಳ್ಳುವುದರಿಂದ ಯಾರೂ ಚಿಕ್ಕವರಾಗುವುದಿಲ್ಲ. “ಹೌದು, ನನ್ನಿಂದ ತಪ್ಪಾಗಿದೆ, ಮುಂದಿನ ಬಾರಿ ಸರಿಪಡಿಸಿಕೊಳ್ಳುತ್ತೇನೆ” ಎಂದು ಹೇಳುವುದನ್ನು ರೂಢಿಸಿಕೊಳ್ಳಬೇಕು. ಇದು ನಿಮ್ಮ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ.

ಇಗೋ ಪಕ್ಕಕ್ಕಿಟ್ಟು ಆಲಿಸಬೇಕು:
ಬೇರೆಯವರು ಮಾತನಾಡುವಾಗ, ಅವರು ಮಾತನ್ನು ಮುಗಿಸುವ ಮುನ್ನವೇ “ನಾನು ಏನು ಉತ್ತರ ಕೊಡಬೇಕು” ಎಂದು ಯೋಚಿಸಬಾರದು. ಮೊದಲು ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಪೂರ್ತಿಯಾಗಿ ಆಲಿಸಿ. ಅವರ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಆಂತರಿಕ ಭಯವನ್ನು ಗುರುತಿಸಿ
ನಾವು ಡಿಫೆನ್ಸೀವ್ ಆಗಲು ಮುಖ್ಯ ಕಾರಣ ನಮ್ಮೊಳಗಿನ ಕೀಳರಿಮೆ ಅಥವಾ ಸೋಲಿನ ಭಯ. “ನಾನು ಪರಿಪೂರ್ಣನಾಗಿರಬೇಕು” ಎಂಬ ಭ್ರಮೆಯಿಂದ ಹೊರಬಂದು. ನಿಮ್ಮ ದೌರ್ಬಲ್ಯಗಳನ್ನು ನೀವೇ ಒಪ್ಪಿಕೊಂಡಾಗ, ಬೇರೆಯವರು ಅದನ್ನು ಎತ್ತಿ ತೋರಿಸಿದಾಗ ನಿಮಗೆ ಕೋಪ ಬರುವುದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !