SKIN CARE| ಚಳಿಗಾಲ ಶುರುವಾಯ್ತು, ನಿಮ್ಮ ಚರ್ಮ ರಕ್ಷಣೆಗೆ ಮುಂಜಾಗ್ರತೆ ವಹಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಳಿಗಾಲದಲ್ಲಿ ಪ್ರತಿಯೊಬ್ಬರೂ ಚರ್ಮದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ, ಈ ಋತುಮಾನದಲ್ಲಿ ಚರ್ಮ ಬಿರುಕು ಬಿಡುವುದು, ತುರಿಕೆ, ಶುಷ್ಕತೆಯಂತಹ ಸಮಸ್ಯೆಗಳು ಕಾಡುತ್ತವೆ. ಈ ಸಮಯದಲ್ಲಿ ಚರ್ಮದ ಆರೈಕೆ ಬಹಳ ಮುಖ್ಯ.

  • ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಹಿತ ಅನಿಸಿದರೂ ಬಿಸಿನೀರಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಚರ್ಮವು ಅದರ ನೈಸರ್ಗಿಕ ತೇವಾಂಶ ಕಳೆದುಹೋಗುವ ಸಾಧ್ಯತೆಯಿದೆ.
  • ಚರ್ಮದ ಶುಷ್ಕತೆಯನ್ನು ತಡೆಗಟ್ಟಲು ಹೈಡ್ರೇಟಿಂಗ್ ಟೋನರುಗಳನ್ನು ಬಳಸಬಹುದು. ಚಳಿಗಾಲದಲ್ಲಿ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದು ತುಂಬಾ ಪ್ರಯೋಜನಕಾರಿ.
  • ಎಣ್ಣೆಯುಕ್ತ ಚರ್ಮ ಹೊಂದಿರುವ ಜನರು ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ಬಳಸಬೇಕು.
  • ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ತಂಪಾದ ವಾತಾವರಣದಿಂದ ರಕ್ಷಿಸಲು ಹೆಚ್ಚು ನೀರು ಕುಡಿಯಿರಿ.
  • ತ್ವಚೆಯನ್ನು ಆರೋಗ್ಯವಾಗಿಡಲು ಹಣ್ಣು ಮತ್ತು ಹಣ್ಣಿನ ಜ್ಯೂಸ್ ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ‌
  • ಚರ್ಮವನ್ನು ಹೈಡ್ರೇಟ್ ಮಾಡುವ ಮತ್ತು ಪೋಷಿಸುವ ಫೇಸ್ ಮಾಸ್ಕ್ ಅನ್ನು ಬಳಸುವುದು ಮುಖ್ಯ.
  • ಸ್ನಾನ ಮಾಡಿದ ತಕ್ಷಣ ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಬೇಕು.
  • ಚಳಿಯಲ್ಲಿ ಹೊರಗೆ ಹೋಗುವಾಗ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಸ್ಕಾರ್ಫ್, ಜರ್ಕಿನ್, ತಲೆಗೆ ಹೆಲ್ಮೆಟ್, ಕಾಲಿಗೆ ಶೂ, ಕೈಗಳಿಗೆ ಗ್ಲೌಸ್ ಧರಿಸಬೇಕು.
  • ವಾರಕ್ಕೊಮ್ಮೆ ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!