ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೇಸ್‌ಬುಕ್, ಇನ್ಸ್ಟಾಗ್ರಾಮ್ ನಂತರ ಹ್ಯಾಕರ್ಸ್ ಇದೀಗ ವಾಟ್ಸಾಪ್ ಮೇಲೆ ಕಣ್ಣಿಟ್ಟಿದ್ದಾರೆ. ನಿಮಗೇ ಗೊತ್ತಿಲ್ಲದಂತೆ, ನಿಮ್ಮ ಆತ್ಮೀಯರ ಸೋಗಿನಲ್ಲಿ ನಗುತ್ತಾ ಮೆಸೇಜ್ ಮಾಡಿ ನಿಮ್ಮ ಅಕೌಂಟ್ ಹ್ಯಾಕ್ ಮಾಡುತ್ತಾರೆ.
ಹೌದು, ಯಾವ ರೀತಿ ಹ್ಯಾಕ್ ಮಾಡ್ತಾರೆ? ನಾವು ಏನು ಮಾಡಬಹುದು? ಇಲ್ಲಿದೆ ಮಾಹಿತಿ..
ನೀವು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ನೋಡುತ್ತಾ ಕುಳಿತಿದ್ದಂತೆಯೇ ಯಾವುದೋ ಸಂಖ್ಯೆಯಿಂದ ಸಂದೇಶಗಳು ಆಗಮಿಸುತ್ತವೆ. ಅದರಲ್ಲಿ ಯಾರೋ ಗೊತ್ತಿಲ್ಲದವರಂತೆ ಅವರು ವರ್ತಿಸೋದಿಲ್ಲ. ನಿಮ್ಮದೇ ಸ್ನೇಹಿತರೋ ಅಥವಾ ಪರಿಚಯ ಇರುವವರಂತೆ ನಡೆದುಕೊಳ್ತಾರೆ. ನೋಟಿಫಿಕೇಷನ್ ಕೂಡ ಹಾಗೆಯೇ ಬರುತ್ತದೆ. ಆದರೆ ಇದಕ್ಕೆಲ್ಲ ನೀವು ಕಿವಿಕೊಡಬೇಡಿ. ಇದನ್ನು ಕ್ಲಿಕ್ ಮಾಡಿ ನೀವು ಎಲ್ಲಕ್ಕೂ ಒಕೆ ಎಂದು ಹೇಳುತ್ತಾ ಹೋದಂತೆ ನಿಮ್ಮ ಡಾಟಾ ಎಲ್ಲವನ್ನು ಕದ್ದು ಬಿಡುತ್ತಾರೆ.
ನೀವು ನಿಮ್ಮ ಮೊಬೈಲ್ ಫೋನ್ ನೋಡುತ್ತಾ ವಾಟ್ಸಾಪ್ ಸಂದೇಶಗಳನ್ನು ವೀಕ್ಷಿಸುತ್ತಿದ್ದಂತೆಯೇ ಹ್ಯಾಕಿಂಗ್ ಬಲೆಗೆ ಬೀಳಬಹುದು. ಇದ್ದಕ್ಕಿದ್ದಂತೆ ಬಹುಕಾಲದ ಸ್ನೇಹಿತ, ಅನೇಕ ವರ್ಷಗಳಿಂದ ಗೊತ್ತಿರುವ ಗೆಳೆಯ ಎಂಬಂತಹ ನೋಟಿಫಿಕೇಷನ್ ಬರುತ್ತದೆ. ನೀವು ಅಲ್ಲಿ ಚಾಟ್ ಮಾಡಲು ಶುರು ಮಾಡುತ್ತಿದ್ದಂತೆಯೇ ಶುಭಾಶಯ ಹೇಳುವುದರೊಂದಿಗೆ ನಿಧಾನವಾಗಿ ಬಲೆಗೆ ಬೀಳಿಸುವ ಪ್ರಯತ್ನ ನಡೆಯುತ್ತದೆ. ಹೇ, ನಾನು ಹೊಸ ಫೋನ್ ಪಡೆದುಕೊಂಡಿದ್ದೇನೆ. ಅಚಾನಕ್ಕಾಗಿ ಕೋಡ್ ವೊಂದನ್ನು ನಿಮ್ಮ ನಂಬರ್ ಗೆ ಕಳುಹಿಸಿದ್ದೇನೆ. ಅದನ್ನು ನನಗೆ ವಾಪಸ್ ಕಳುಹಿಸಬಹುದೇ? ಎಂದು ಕೇಳಲಾಗುತ್ತದೆ. ಯಾವುದೇ ಎಚ್ಚರಿಕೆ ಸಂದೇಶ ಬರಲ್ಲ. ನೀವು ಎಲ್ಲಾ ವಿಷಯಗಳನ್ನು ಹೇಳಿಕೊಂಡ ನಂತರ ಒನ್ ಟೈಮ್ ಪಾಸ್‌ವರ್ಡ್ ಕಳುಹಿಸಿದರೆ ಹ್ಯಾಕಿಂಗ್ ಬಲೆಗೆ ಬಿದ್ದೀರಿ ಎಂಬುದು ಸ್ಪಷ್ಟ.
ಒಂದು ಬಾರಿ ನಿಮ್ಮ ವಾಟ್ಸಾಪ್ ಹ್ಯಾಕಿಂಗ್ ಆದರೆ, ನಿಮ್ಮ ಸಂಪರ್ಕದಲ್ಲಿರುವ ಇತರರ ಖಾತೆಗಳನ್ನು ಹ್ಯಾಕರ್ ಗಳು ಗುರಿ ಮಾಡುತ್ತಾರೆ. ಅದೇ ಸರಳ ತಂತ್ರವನ್ನು ಬಳಸುತ್ತಾರೆ. ಹೀಗೆ ಒಬ್ಬರಾದ ನಂತರ ಮತ್ತೊಬ್ಬರನ್ನು ಸಾಲು ಸಾಲಾಗಿ ಹ್ಯಾಕಿಂಗ್ ಬಲೆಗೆ ಬೀಳಿಸುತ್ತಾರೆ. ಫೋನ್ ಗಳು ಸ್ವೀಚ್ ಆಫ್ ಆದಾಗ ಆರು ನಂಬರ್ ಗಳ ಕೋಡ್ಸ್ ನ್ನು ವಾಟ್ಸಾಪ್ ಗೆ ಕಳುಹಿಸುವ ಮೂಲಕ ನಿಮ್ಮ ಖಾತೆ ಹೈಜಾಕ್ ಮಾಡುತ್ತಾರೆ. ನೇರವಾಗಿ ಈ ಹಗರಣ ಮಾಡುತ್ತಿದ್ದರೂ ಅನೇಕರು ಅದರ ಬಲೆಗೆ ಬೀಳುತ್ತಿದ್ದಾರೆ. ಮೋಸಹೋದ ಹತಾಶೆಯಲ್ಲಿ ನೀವು ಏನೇ ಮಾಡಿದರೂ ಮರಳಿ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಎಲ್ಲಾ ನಂತರ ಹ್ಯಾಂಕರ್ಸ್ ನಿಮ್ಮ ವಾಟ್ಸಪ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ.
ಬಳಿಕ ನಿಮ್ಮ ಸ್ನೇಹಿತರಿಗೆ ಸಂದೇಶ ಕಳುಹಿಸಿ, ವೈಯುಕ್ತಿಕ ಮಾಹಿತಿ ಹಂಚಿಕೊಳ್ಳಬಹುದು ಅಥವಾ UPI ಪಾವತಿ ಮೂಲಕ ಅವರ ಖಾತೆಗಳಿಗೆ ಹಣ ಹಾಕಿಸಿಕೊಳ್ಳಬಹುದು. ಹ್ಯಾಕಿಂಗ್ ಕುರಿತು ನಿಮ್ಮ ಸಂಪರ್ಕದಲ್ಲಿರುವವರಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದಾಗ ಹ್ಯಾಕರ್ ಗಳು ತ್ವರಿತಗತಿಯಲ್ಲಿ ಸಂದೇಶಗಳನ್ನು ಡಿಲೀಟ್ ಮಾಡುತ್ತಾರೆ. ಹೀಗೆ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹ್ಯಾಕಿಂಗ್ ಬಲೆಗೆ ಬೀಳುತ್ತಿದ್ದಾರೆ.
ಹ್ಯಾಕ್ ಆಗದಿರಲು ಏನು ಮಾಡ್ಬೇಕು?
ಎರಡು ಬಾರಿ ಚೆಕ್ ಮಾಡಿ WhatsApp ನ ಎರಡು-ಹಂತದ ಪರಿಶೀಲನೆಯು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಆ್ಯಪ್ ನಲ್ಲಿ Settings > Account > Two-Step Verification ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ವೈಯಕ್ತಿಕ ಪಿನ್ ಮತ್ತು ಆರು-ಅಂಕಿಯ ಕೋಡ್ ನೀಡುವ ಅಗತ್ಯವಿದೆ. ನಂತರ ನಿಮ್ಮ ಖಾತೆಯನ್ನು ಹೊಸ ಫೋನ್‌ಗೆ ಸೇರಿಸಲು ಎರಡೂ ಅಗತ್ಯವಿರುತ್ತದೆ.
ಇಲೇಲ್ ಸೇರಿಸಿ.Settings > Account ನ್ನು ನಿಮ್ಮ ಖಾತೆಯ ಇಮೇಲ್ ಅಡ್ರೆಸ್ ಗೆ ಸೇರಿಸಬೇಕು. ಇದು ನೀವು ಎಂದಾದರೂ ನಿಮ್ಮ ಖಾತೆಯನ್ನು ಮರುಪಡೆಯಬೇಕಾದರೆ ನಿಮ್ಮ ಗುರುತನ್ನು ಪರಿಶೀಲಿಸಲು ನೆರವಾಗುತ್ತದೆ. ಇದು ಹೈಜಾಕ್ ನಿಲ್ಲಿಸದಿದ್ದರೂ ಮತ್ತೆ ಮಾಹಿತಿ ಪಡೆಯಲು ನೆರವಾಗಬಹುದು.