ಯಾವ ಸಚಿವರಿಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಸಿಎಂ ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ. ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆ ನಂತರ ಸಂಪುಟ ವಿಸ್ತರಣೆ ಯಶಸ್ವಿಯಾಗಿದೆ.

ಇಂದು 24 ಶಾಸಕರು ಮಂತ್ರಿಗಳಾಗಿ ಪಟ್ಟ ಅಲಂಕರಿಸಿದ್ದಾರೆ, ರಾಜಭವನದ ಗಾಜಿನ ಮನೆಯಲ್ಲಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಸಚಿವರಿಗೆ ಖಾತೆಗಳನ್ನು ಇಂದೇ ಹಂಚಲಾಗಿದ್ದು, ಹಣಕಾಸು, ಗುಪ್ತಚರ ಹಾಗೂ ಡಿಪಿಎಆರ್ ಸೇರಿದಂತೆ ಹಂಚಿಕೆಯಾಗದ ಕೆಲ ಖಾತೆಗಳನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಜಲಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆ ಸಿಕ್ಕಿದೆ. ಯಾವ ಸಚಿವರಿಗೆ ಯಾವ ಖಾತೆ? ಇಲ್ಲಿದೆ ಡೀಟೇಲ್ಸ್…

  • ಸಿದ್ದರಾಮಯ್ಯ – ಹಣಕಾಸು, ಗುಪ್ತಚರ, ಡಿಪಿಎಆರ್, ಹಂಚಿಕೆಯಾಗದ ಎಲ್ಲಾ ಖಾತೆಗಳು
  • ಡಿಕೆಶಿ – ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ
  • ಪರಮೇಶ್ವರ್ – ಗೃಹ
  • ಕೆ.ಜೆ.ಜಾರ್ಜ್ – ಇಂಧನ
  • ಕೆ.ಎಚ್.ಮುನಿಯಪ್ಪ – ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ
  • ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಐಟಿ ಬಿಟಿ
  • ಪ್ರಿಯಾಂಕ್ ಖರ್ಗೆ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
  • ರಾಮಲಿಂಗಾರೆಡ್ಡಿ – ಸಾರಿಗೆ
  • ಹೆಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
  • ಕೃಷ್ಣಬೈರೇಗೌಡ – ಕಂದಾಯ
  • ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಸತೀಶ್ ಜಾರಕಿಹೊಳಿ – ಸಮಾಜ ಕಲ್ಯಾಣ
  • ಬೈರತಿ ಸುರೇಶ್ – ನಗರ ಅಭಿವೃದ್ಧಿ
  • ಡಾ.ಶರಣಪ್ರಕಾಶ್ – ಉನ್ನತ ಶಿಕ್ಷಣ
  • ರಾಜಣ್ಣ – ಸಹಕಾರ
  • ಆರ್. ಬಿ. ತಿಮ್ಮಾಪುರ್ – ಅಬಕಾರಿ, ಮುಜುರಾಯಿ
  • ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಚಲುವರಾಯಸ್ವಾಮಿ – ಕೃಷಿ
  • ವೆಂಕಟೇಶ್ – ಪಶುಸಂಗೋಪನೆ, ರೇಷ್ಮೆ
  • ಈಶ್ವರ್ ಖಂಡ್ರೆ – ಅರಣ್ಯ, ಪರಿಸರ
  • ಶರಣ ಬಸಪ್ಪ ದರ್ಶನಾಪುರ್ – ಮಧ್ಯಮ ಕೈಗಾರಿಕೆ, ಸಾರ್ವಜನಿಕಾ ಕೈಗಾರಿಕೆ
  • ಶಿವಾನಂದ ಪಾಟೀಲ್ – ಜವಳಿ
  • ಎಸ್‍.ಎಸ್. ಮಲ್ಲಿಕಾರ್ಜುನ್ – ಗಣಿ, ತೋಟಗಾರಿಕೆ
  • ಶಿವರಾಜ್ ತಂಗಡಗಿ – ಹಿಂದುಳಿದ ವರ್ಗಗಳು ಮತ್ತು ಎಸ್‍ಟಿ ಕಲ್ಯಾಣ
  • ಮಂಕಾಳ ಸುಬ್ಬವೈದ್ಯ – ಮೀನುಗಾರಿಕೆ ಮತ್ತು ಬಂದರು
  • ರಹೀಂ ಖಾನ್ – ಪೌರಾಡಳಿತ, ಹಜ್
  • ಡಿ.ಸುಧಾಕರ್ – ಮುಜರಾಯಿ
  • ಸಂತೋಷ್ ಲಾಡ್ – ಕಾರ್ಮಿಕ, ಕೌಶಲ್ಯಭಿವೃದ್ಧಿ
  • ಎನ್‍.ಎಸ್. ಬೋಸರಾಜು – ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
  • ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಎಂ.ಸಿ. ಸುಧಾಕರ್ – ವೈದ್ಯಕೀಯ ಶಿಕ್ಷಣ
  • ಬಿ. ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ
  • ಬಿ. ನಾಗೇಂದ್ರ – ಯುವ ಸಬಲೀಕರಣ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ
  • ಜಮೀರ್ ಅಹಮದ್ ಖಾನ್ – ವಸತಿ ವಕ್ಫ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!