ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮ ನಕ್ಷತ್ರ ಹಾಗೂ ರಾಶಿ ಚಕ್ರವನ್ನು ಹೊಂದಿರುತ್ತಾನೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು ರಚಿಸಲಾಗುವುದು. ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ನಮ್ಮ ರಾಶಿಯನ್ನು ಆಳುವ ಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ನಿತ್ಯದ ಬದುಕು ನಿರ್ಧಾರವಾಗುತ್ತದೆ. ಪ್ರತೀ ರಾಶಿಗೆ ಹೊಂದಾಣಿಕೆಯಾಗುವ ಹರಳುಗಳನ್ನು ಧರಿಸಿದರೆ ಜೀವನದಲ್ಲಿ ಏಳಿಗೆಯಾಗುತ್ತದೆ. ಆಯಾ ರಾಶಿಯವರಿಗೆ ಸೂಕ್ತವಾದಂತಹ ಹರಳುಗಳಿದ್ದು, ಅವುಗಳನ್ನು ಧರಿಸುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ವೇದಿಕ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ರಾಶಿ ನಿಮ್ಮನ್ನು ಆಳುವ ಗ್ರಹದ ಮೇಲೆ ಆಧಾರಿತವಾಗಿರುತ್ತದೆ. ಮೇಷ ರಾಶಿಯವರು ಹವಳ ಬಿಟ್ಟು ಬೇರೆಯ ಹರಳುಗಳನ್ನು ಧರಿಸುವುದು ಶುಭವಲ್ಲ. ಹೀಗೆ ಯಾವ ರಾಶಿಗೆ ಯಾವ ಹರಳು ಧಾರಣೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ..
ಮೇಷ ರಾಶಿಯವರು ತಮ್ಮ ದೈನಂದಿನ ಬಳಕೆಯ ಆಭರಣಗಳಲ್ಲಿ ಹವಳವನ್ನು ಬಳಸುವುದು ಸೂಕ್ತವಾಗಿದೆ. ಸಾಧ್ಯವಾದರೆ ಹವಳದ ಉಂಗುವರನ್ನು ಧರಿಸಿ. ಇದು ನಿಮ್ಮ ಜೀವನದಲ್ಲಿ ಶಾಂತಿ ಸ್ಥಿರವಾಗಿ ಇರುವಂತೆ ಕಾಪಾಡುತ್ತದೆ.

ವೃಷಭ ರಾಶಿಯವರಿಗೆ ಎರಡು ಹರಳುಗಳು ಅದೃಷ್ಟ ತರುತ್ತವೆ. ವಜ್ರ ಅಥವಾ ಬಿಳಿ ಹರಳನ್ನು ಅವರು ಧರಿಸಬಹುದು. ಶುಕ್ರ ಗ್ರಹ ಈ ರಾಶಿಯ ಜನರ ಅಧಿಪತಿಯಾಗಿದ್ದಾನೆ.

ಮಿಥುನ ರಾಶಿಯ ಅಧಿಪತಿ ಬುಧನಾಗಿದ್ದು, ಈ ರಾಶಿಯವರು ಪಚ್ಚೆ ಅಂದರೆ ಹಸಿರು ಬಣ್ಣದ ಸ್ಟೋನ್ ಇರುವ ಉಂಗುರವನ್ನು ಧರಿಸಬಹುದು. ಇದು ಇವರ ಜೀವನದಲ್ಲಿ ನೆಮ್ಮದಿ ಹಾಗೂ ಜ್ಞಾನವನ್ನು ತರುತ್ತದೆ.

ಕರ್ಕಾಟಕ ರಾಶಿಯವರು ತಮ್ಮ ಕೈಗೆ ಮುತ್ತಿನ ಉಂಗುರ ಹಾಕಿಕೊಳ್ಳುವುದು ಸೂಕ್ತವಾಗಿದೆ. ಈ ರಾಶಿಯವರನ್ನು ಚಂದ್ರ ಆಳುತ್ತಾನೆ. ಚಂದ್ರನಂತಹ ಸೂಕ್ಷ್ಮ ಗುಣದ ವ್ಯಕ್ತಿಗಳು ಇವರಾಗಿದ್ದಾರೆ.

ಸಿಂಹ ರಾಶಿಯವರ ಅಧಿಪತಿ ಸೂರ್ಯನಾಗಿದ್ದು, ಈ ರಾಶಿಯವರು ಕೈಗೆ ಮಾಣಿಕ್ಯದ ಉಂಗುರ ಧರಿಸಬಹುದು.

ಕನ್ಯಾ ರಾಶಿಯವರು ಶಾಂತ ಸ್ವಭಾವದ ಜನರಾಗಿದ್ದು, ಇವರಿಗೆ ಧೈರ್ಯ ಹಾಗೂ ಐಶ್ವರ್ಯ ವೃದ್ಧಿಯಾಗಲು ಪಚ್ಚೆಯ ಆಭರಣಗಳನ್ನು ಧರಿಸಬೇಕು.

ತುಲಾ ರಾಶಿಯ ಅಧಿಪತಿ ಶುಕ್ರ. ಇವರಿಗೆ ಎರಡು ಆಯ್ಕೆಗಳಿವೆ. ವಜ್ರ, ಬಿಳಿ ಹರಳು ಅಥವಾ ನೀಲಮಣಿಯನ್ನು ಧರಿಸಬಹುದು.

ವೃಶ್ಚಿಕ ರಾಶಿಯವರನ್ನು ಮಂಗಳ ಆಳುತ್ತಾನೆ. ಇವರು ಹವಳದ ಬಳಕೆ ಮಾಡಬೇಕು. ಇದರಿಂದ ಜೀವನದಲ್ಲಿ ಹೊಸ ಆಕಾಂಕ್ಷೆಗಳು ಮೂಡುತ್ತವೆ. ಧೈರ್ಯ, ಶಕ್ತಿ ಹೆಚ್ಚಾಗುತ್ತದೆ.

ಧನು ರಾಶಿಯವರು ಟೋಪೇಜ್ ಹರಳನ್ನು ಧರಿಸಬೇಕು. ಇದರಿಂದ ಪಾಪ ಕರ್ಮದ ಕೆಲಸ ಮಾಡುವ ಮನಸ್ಸನ್ನು ನಿಯಂತ್ರಣದಲ್ಲಿ ಇಡುತ್ತದೆ.

ಮಕರ ಹಾಗೂ ಕುಂಭ ರಾಶಿಯವರಿಗೆ ನೀಲಿ ಬಣ್ಣ ಅತ್ಯುತ್ತಮ ಇದರಿಂದ ಅವರಿಗೆ ಸಕಾರಾತ್ಮಕ ಭಾವನೆ ಹೆಚ್ಚಾಗುತ್ತದೆ. ಜೊತೆಗೆ ಗಾಳಿಯಲ್ಲಿ ಹರಡುವ ರೋಗಗಳಿಂದ ರಕ್ಷಣೆ ಸಿಗುವ ಸಾಧ್ಯತೆ ಇದೆ.

ಮೀನ ರಾಶಿಯವರಿಗೆ ಟೋಪೇಜ್ ಅತ್ಯುತ್ತಮ ಇದರಿಂದ ಸಕಾರಾತ್ಮಕ ಶಕ್ತಿ ಇವರನ್ನು ಪ್ರವೇಶಿಸುತ್ತದೆ. ಜೀವನದಲ್ಲಿ ಎಂತಹ ಸಂದರ್ಭ ಬಂದರೂ ಎದುರಿಸುವ ಧೈರ್ಯ ಸಿಗುತ್ತದೆ.



