ಹಾಸಿಗೆಯಿಂದ ಎದ್ದ ನಂತರ ಹಿಂದೂಗಳ ಈ ಪ್ರಾರ್ಥನೆ ಮಾಡೋದ್ಯಾಕೆ ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಹಿಂದೂ ಸಂಪ್ರದಾಯಕ್ಕೆ ಸಾವಿರಾರು ವರ್ಷಗಳ ಹಿಂದಿನಿಂದ ಭದ್ರ ಬುನಾದಿ ಇದೆ. ಇದರ ತಳಹದಿಯಲ್ಲಿ ಬರುವ ಸ್ತ್ರೋತ್ರ, ಮಂತ್ರ ಪಠಣ, ಪಾರಾಯಣಗಳಿಗೂ ಕೂಡ ಅದರದ್ದೇ ಆದ ಮಹತ್ವವಿದೆ. ಸಾಮಾನ್ಯವಾಗಿ ಮುಂಜಾನೆ ಏಳುವುದರಿಂದ ಹಿಡಿದು ಮಲಗುವವರೆಗೂ ಒಂದೊಂದು ಕಾರ್ಯಕ್ಕೂ ಒಂದೊಂದು ಸ್ತೋತ್ರ ಇದೆ. ಅದರಲ್ಲಿ ಬಹಳ ಮುಖ್ಯ ಅಂದರೆ ʻಪ್ರಭಾತ ಸ್ತೋತ್ರʼ.
ಎದ್ದ ನಂತರ ಹಾಸಿಗೆಯಲ್ಲಿದ್ದಾಗ ಹಿಂದೂಗಳು ಈ ಪ್ರಾರ್ಥನೆಯನ್ನು ಪಠಿಸುತ್ತಾರೆ ಅದೇ ʻಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ʼ ಶಾಸ್ತ್ರಗಳ ಪ್ರಕಾರ ಲಕ್ಷ್ಮೀ, ಸ್ಸವತಿ, ಗೌರಿ ಮೂವರು ಹಸ್ತದಲ್ಲಿರುತ್ತಾರೆ ಎಂಬ ನಂಬಿಕೆ ಹಾಗಾಗಿಯೇ ಎದ್ದ ಕೂಡಲೇ ಹಸ್ತವನ್ನು ಕಣ್ಣಿಗೊತ್ತಿಕೊಳ್ಳುವ ರೂಢಿಯಿದೆ.

ಆದರೆ, ವಿಜ್ಞಾನ ಇದನ್ನು ಆರೋಗ್ಯ ದೃಷ್ಟಿ ಗಮನದಲ್ಲಿರಿಸಿ ಹೇಳಿದೆ. ಅಂಗಾತ ಮಲಗಿದ ವೇಳೆ ದೀಢೀರನೆ ಏಳುವುದರಿಂದ ಹೃದಯಕ್ಕೆ ಆಯಾಸವುಂಟಾಗಿ ರಕ್ತ ಪರಿಚಲನೆ ಸರಾಗವಾಗಿ ಹರಿಯಲು ಕಷ್ಟವಾಗುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು.( ಹೃದಯ ಸಂಬಂಧಿ ಕಾಯಿಲೆಯಿರುವವರು ನಿದ್ರೆಯಿಂದ ಏಕಾಏಕಿ ಎದ್ದಾಗ ಅಥವಾ ಒಮ್ಮೇಲೇ ನಡೆಯಲು ಪ್ರಯತ್ನಿಸಿದಾಗ 23% ಹೃದಯಾಘಾತಗಳು ಸಂಭವಿಸಿದೆ ಎಂದು ವರದಿಗಳು ಹೇಳುತ್ತವೆ) ಹಾಗಾಗಿಯೇ ನಿಧಾನವಾಗಿ ಎದ್ದು ಕೈಗಳನ್ನು ಉಜ್ಜಿ ಕೆಲ ಕ್ಷಣಗಳ ಕಾಲ ಕುಳಿತುಕೊಳ್ಳುವುದರಿಂದ ದೇಹಕ್ಕೆ ಸ್ವಲ್ಪ ವ್ಯಾಯಾಮ ಆದಂತಾಗುತ್ತದೆ. ಪರಿಣಾಮವಾಗಿ ಹೃದಯಾಘಾತದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದು ಇದರ ಹಿಂದಿರುವ ಉದ್ದೇಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!