October 12, 2026
Monday, October 12, 2026
spot_img

ಬೇರೆ ಎಲ್ಲಾದಕ್ಕೂ ನಾನು ಬೇಕು, ಆದರೆ ಖಾತೆ ಕೊಡೋದಕ್ಕೆ ನಾನು ಬೇಡ ಅಲ್ವಾ? ರಾಮಲಿಂಗಾರೆಡ್ಡಿ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಅಂದ ತಕ್ಷಣ ಎಲ್ಲಾದಕ್ಕೂ ನನ್ನ ಹೆಸರೇ ಬರುತ್ತದೆ. ಆದರೆ ಖಾತೆ ಕೊಡೋಕೆ ಏನ್ರೀ ಕಷ್ಟ? ಎಂದು ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎದುರಿಗೇ ಗರಂ ಆಗಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ತೀವ್ರ ಅಸಮಾಧಾನದಿಂದ ಸಚಿವರು ರಾಜೀನಾಮೆ ನೀಡ್ತಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ಬೇಕು, ಜಲಸಂಪನ್ಮೂಲ ಖಾತೆ ಬೇಡ. ನಾನು ಬೆಂಗಳೂರಿನ ಅಭಿವೃದ್ಧಿಯಿಂದಲೇ ಗುರುತಿಸಿಕೊಂಡವನು. ನಾಳೆ ಬೆಳಗ್ಗೆ ಒಳಗೆ ಖಾತೆ ಕೊಡಬೇಕು. ಇಲ್ಲವಾದರೆ ರಾಜೀನಾಮೆ ಪತ್ರೆ ಕೊಡ್ತೇನೆ ಎಂದು ಡಿಕೆಶಿ ಎದುರೇ ಹೇಳಿದ್ದಾರೆ.

ಮೊದಲಿನಿಂದಲೂ ನನಗೆ ಬೆಂಗಳೂರು ಅಭಿವೃದ್ಧಿ ಖಾತೆಯೇ ಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದ್ದರು. ನಾನು ಹಿರಿಯ, ನನಗೆ ಅನುಭವ ಇದೆ. ಕಳೆದ ಬಾರಿಯೂ ಸರಿಯಾಗಿರೋ ಖಾತೆ ಕೊಡ್ಲಿಲ್ಲ. ನನಗೂ ಜಲಸಂಪನ್ಮೂಲ ಖಾತೆಗೂ ಏನು ಸಂಬಂಧ ಇದೆ? ಬೆಂಗಳೂರಿನಲ್ಲಿ ಏನೇ ಸಮಸ್ಯೆ ಬಂದ್ರೂ ನನ್ನ ಬಳಿ ಬರ್ತೀರಿ. ಆದರೆ ಖಾತೆ ಕೊಡೋದಕ್ಕೆ ಯಾಕೆ ಕಷ್ಟ ಎಂದು ಗರಂ ಆಗಿದ್ದಾರೆ.

ಇದಕ್ಕೆ ಡಿಕೆಶಿ ಉತ್ತರಿಸಿ, ಖಾತೆ ಕೊಟ್ಟಿದ್ದು ನಾವಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಒಪ್ಪಲಿಲ್ಲ. ನನ್ನ ಪಾತ್ರ ಏನಿಲ್ಲ, ಎಲ್ಲವೂ ಹೈಕಮಾಂಡ್‌ ನಿರ್ಧಾರ ಎಂದಿದ್ದಾರೆ.

Must Read