ವೆಜ್ ಹಾಗೂ ನಾನ್‌ವೆಜ್ ಆಹಾರಕ್ಕೆ ಹಸಿರು, ಕೆಂಪು ಡಾಟ್ ಯಾಕಿರತ್ತೆ?

ಇದನ್ನ ಎಲ್ಲರೂ ಗಮನಿಸಿಯೇ ಇರುತ್ತೀರಿ. ಸಸ್ಯಹಾರಿ ಆಹಾರಗಳ ಮೇಲೆ ಹಸಿರು ಚುಕ್ಕಿ, ಮಾಂಸಾಹಾರಿ ಆಹಾರಗಳ ಮೇಲೆ ಕೆಂಪು ಚುಕ್ಕಿ ಇರುತ್ತದೆ. ಆದರೆ ಇದೇ ಬಣ್ಣ ಇರೋದ್ಯಾಕೆ?

ವರದಿಯೊಂದರ ಪ್ರಕಾರ, ಎಲ್ಲ ಸಸ್ಯಹಾರಿ ಆಹಾರಗಳಲ್ಲಿಯೂ ಹಸಿರು ಇದ್ದೇ ಇರುತ್ತದೆ. ಅದು ತರಕಾರಿ ಇರಬಹುದು ಅಥವಾ ಹಣ್ಣು ಇರಬಹುದು. ಈ ಕಾರಣದಿಂದ ಹಸಿರು ಬಣ್ಣದ ಡಾಟ್ ಇಡಲಾಗುತ್ತದೆಯಂತೆ, ಇನ್ನು ನಾನ್‌ವೆಜ್ ಎಂದರೆ ಅಲ್ಲಿ ಕಾಮನ್ ಅಂಶ ರಕ್ತ ಅಂದರೆ ಕೆಂಪು, ಹಾಗಾಗಿ ಕೆಂಪು ಬಣ್ಣ ಇದೆ ಎನ್ನಲಾಗುತ್ತದೆ. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಈ ರೀತಿ ಚೌಕಾಕಾರದೊಳಗೆ ಡಾಟ್‌ನ್ನು ಎಲ್ಲ ಆಹಾರ ಪೊಟ್ಟಣಗಳ ಮೇಲೆ ಬಳಸುವುದು ಕಡ್ಡಾಯ ಎಂದಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!