ಹಣ ಉಳಿಸೋದು ಅಷ್ಟು ಕಷ್ಟ ಯಾಕೆ? ಈ ರೀತಿ ಸುಲಭವಾಗಿ ದುಡ್ಡು ಉಳಿಸಿ..

ಮಿಡಲ್ ಕ್ಲಾಸ್ ಜನರಿಗೆ ಹಣವೇ ಒಂದು ದೊಡ್ಡ ಸಮಸ್ಯೆ. ಎಷ್ಟು ದುಡಿದರೂ ಅದಕ್ಕಿಂತ ಹೆಚ್ಚು ಕಮಿಟ್‌ಮೆಂಟ್ಸ್ ಮಾಡಿಕೊಂಡಿರುತ್ತಾರೆ. ಒಂದು ರೂಪಾಯಿ ಹಣ ಉಳಿತಾಯವೂ ಮುಖ್ಯ. ಹನಿ ಹನಿ ಗೂಡಿದರೆ ಹಳ್ಳ ಎನ್ನುವ ಮಾತು ಇಲ್ಲಿ ಸದಾ ನೆನಪಿರಲಿ. ಹಣ ಉಳಿತಾಯಕ್ಕೆ ಸುಲಭ ಮಾರ್ಗಗಳು ಇಲ್ಲಿವೆ..

  • ನಿಮ್ಮ ಊಟ ಮನೆಯಿಂದಲೇ ಬಾಕ್ಸ್‌ನಲ್ಲಿ ತನ್ನಿ, ಹೊರಗೆ ತಿನ್ನುವುದು ಆದಷ್ಟು ನಿಲ್ಲಿಸಿ
  • ಒಬ್ಬರೇ ಆಫೀಸ್‌ಗೆ ಹೋಗುವುದಾದರೆ ಕಾರ್ ಪೂಲ್ ಮಾಡಿ, ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಿ.
  • ಶಾಪಿಂಗ್‌ಗೆ ಮಾಲ್‌ಗೆ ತೆರಳುವ ಬದಲು ಮನೆಯಲ್ಲಿ ಲಿಸ್ಟ್ ಮಾಡಿ ಬೇಕಾದ್ದು ಮಾತ್ರ ತನ್ನಿ, ಕಂಡಿದ್ದೆಲ್ಲಾ ಕೊಳ್ಳುವ ಅಭ್ಯಾಸ ಬೇಡ
  • ಸೂಪರ್ ಸೇವರ್ ಪ್ಯಾಕ್‌ಗಳು, ಬೈ ಒನ್ ಗೆಟ್ ಒನ್ ಆಫರ್‌ಗಳಿಗಾಗಿ ಕಾಯಿರಿ
  • ಮನೆಕೆಲಸ, ಅಡುಗೆ ನೀವೇ ಮಾಡಲು ಕರಿಯಿರಿ
  • ತಿಪ್ಪೆಗೆ ಎಸೆದರೂ ಲೆಕ್ಕ ಇರಲಿ ಎನ್ನುವ ಮಾತು ಸುಮ್ಮನೆ ಹುಟ್ಟಿದ್ದಲ್ಲ. ಲೆಕ್ಕ ಹಾಕಿದರೆ ತಾನೆ, ಹಣ ಎಲ್ಲಿ ಪೋಲಾಗುತ್ತಿದೆ ತಿಳಿಯೋದಕ್ಕೆ
  • ಸೇವಿಂಗ್ಸ್‌ಗೆ ಗೋಲ್ ಇರಲಿ. ತಿಂಗಳಿಗೆ ನೀವು ಎಷ್ಟು ಹಣ ಉಳಿಸಬೇಕು ಎಂದು ಅಂದುಕೊಂಡಿದ್ದೀರೋ ಅದಕ್ಕಿಂತ ಒಂದು ಸಾವಿರ ಕಡಿಮೆ ಉಳಿಸಲು ಪ್ಲಾನ್ ಮಾಡಿ, ತಿಂಗಳಿನಿಂದ ತಿಂಗಳಿಗೆ ಇದನ್ನು ಏರಿಸಿ.
  • ಹಣ ಸೇವಿಂಗ್ಸ್‌ಗೆ ಡಬ್ಬಿ ಇಡೋದು ಮಕ್ಕಳ ಕೆಲಸ ಅನಿಸಬಹುದು. ಆದರೆ ಹಣವನ್ನು ಡಬ್ಬಿಯಲ್ಲಿ ಹಾಕಿ ಇಡುತ್ತಾ ಹೋಗಿ, ಇದು ನಿಮ್ಮ ಸೇವಿಂಗ್ಸ್ ಹೊರತಾಗಿ ಮತ್ತೊಂದು ಸೇವಿಂಗ್ಸ್ ಆಗಲಿ.
  • ಅಗತ್ಯಕ್ಕೆ ತಕ್ಕಷ್ಟು ಬಿಟ್ಟು ಹೆಚ್ಚು ಖರ್ಚು ಮಾಡಬೇಡಿ. ಧೂಮಪಾನದ ಅಭ್ಯಾಸ ಇದ್ದರೆ ಅದನ್ನು ಬಿಡಬಹುದು, ಹೆಚ್ಚು ದುಡ್ಡು ಕೂಡ ಉಳಿಯುತ್ತದೆ.
  • ಮನೆಯಲ್ಲಿ ನಿಮ್ಮದೇ ಪುಟ್ಟ ಗಾರ್ಡನ್ ಮಾಡಿಕೊಳ್ಳಿ. ಊಟಕ್ಕೆ ಬೇಕಾದ ಬೇಸಿಕ್ ತರಕಾರಿ, ಸೊಪ್ಪುಗಳು ಇಲ್ಲಿಂದಲೇ ಬರಲಿ

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!