April 15, 2026
Wednesday, April 15, 2026
spot_img

SUMMER CAMP | ಮಕ್ಕಳನ್ನು ಬೇಸಿಗೆ ಶಿಬಿರಗಳಿಗೇಕೆ ಕಳಿಸ್ಬೇಕು? ಇದರಿಂದ ಲಾಭ ಏನು?

ಎಷ್ಟೋ ಪೋಷಕರಿಗೆ ಬೇಸಿಗೆ ರಜೆ ಅಂದ್ರೆನೇ ಬೇಸರ. ಮಕ್ಕಳನ್ನು ದಿನವೂ ಶಾಲೆಗೆ ಕಳಿಸಿ ನಂತರ ಸಿಗುತ್ತಿದ್ದ ಸೈಲೆನ್ಸ್‌ ಇನ್ನು ಇರೋದಿಲ್ಲ. ಮಕ್ಕಳಿಗೆ ಮೂರು ಹೊತ್ತು ಊಟ, ಮೂರು ಸ್ನಾಕ್ಸ್‌ ಇನ್ನು ಮನೆ ಗಲೀಜು, ಗಲಾಟೆ ಇನ್ನಿತರ ಸಮಸ್ಯೆಗಳು ಇದ್ದಿದ್ದೇ. ಇದು ಎಲ್ಲ ಪೋಷಕರ ಕಥೆ ಅಲ್ಲ, ಕೆಲವರದ್ದು ಮಾತ್ರ. ಹಲವರು ಮಕ್ಕಳನ್ನು ಅಜ್ಜಿ ಮನೆಗೆ ಕಳಿಸಿಬಿಡುತ್ತಾರೆ. ಇಲ್ಲವಾದರೆ ಸಮ್ಮರ್‌ ಕ್ಯಾಂಪ್‌ಗಳಿಗೆ ಹಾಕಿಬಿಡುತ್ತಾರೆ. ಸಮ್ಮರ್‌ ಕ್ಯಾಂಪ್‌ ದುಬಾರಿಯಾಗುತ್ತದೆ. ಮಕ್ಕಳನ್ನು ಯಾಕೆ ಕಳಿಸಬೇಕು ಎಂದು ಪೋಷಕರು ಅಂದುಕೊಳ್ತಾರೆ. ಆದರೆ ಮಕ್ಕಳ ಉತ್ತಮ ಬೆಳವಣಿಗೆಗೆ ಸಮ್ಮರ್‌ ಕ್ಯಾಂಪ್‌ ಬೆಸ್ಟ್‌. ಹೇಗೆ ನೋಡಿ..

ಮನೆಯಲ್ಲಿದ್ದರೆ ಮಕ್ಕಳು ಟಿವಿ ಫೋನ್‌ ನೋಡದೇ ಕಾಲ ಹಾಕೋದು ಕಡಿಮೆ. ಹೀಗಾಗಿ ಫೋನ್‌ ನಿಂದ ದೂರ ಇರಿಸಬಹುದು.

ಬೇರೆಯವರ ಜೊತೆ ಮಾತನಾಡುವುದು, ಸೋಶಿಯಲ್‌ ಸ್ಕಿಲ್ಸ್‌ ಕಲಿತುಕೊಂಡು ಬರುತ್ತಾರೆ.

ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಶಾಲೆಯ ಸ್ನೇಹಿತರು, ಮನೆಯ ಬಳಿ ಇರುವ ಮಕ್ಕಳು ಬಿಟ್ಟರೆ ಇನ್ಯಾರೂ ಸ್ನೇಹಿತರು ಇರೋದಿಲ್ಲ. ಮಕ್ಕಳಿಗೆ ಹೊಸ ಸ್ನೇಹ ಬೆಳೆಸಲು ಅವಕಾಶ.

ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ನೀವೇನು ಹೊಸ ಆಕ್ಟಿವಿಟಿ ಕಲಿಸುತ್ತೀರಿ? ಅಲ್ಲಿ ಹೋದ್ರೆ ಹೊಸತೇನನ್ನೋ ಕಲಿತು ಬರುತ್ತಾರೆ.

ಪಾಠ, ಟ್ಯೂಷನ್‌ ಹಾಗೂ ಮನೆ ಬಿಟ್ಟು ಹೊಸ ಜಾಗಕ್ಕೆ ಹೋಗ್ತಾರೆ. ಹೊಸ ಹೊಸ ಪಾಠಗಳನ್ನು ಕಲಿತು ಬರುತ್ತಾರೆ.

ಶಾಲೆಯ ನೆನಪುಗಳಷ್ಟೇ ಸಮ್ಮರ್‌ ಕ್ಯಾಂಪ್‌ನ ನೆನಪುಗಳೂ ಮುಖ್ಯ. ಬುಕ್ಸ್‌ ಇಲ್ಲದೆ ಫನ್‌ ಮಾಡುವ ಅವಕಾಶ ಮಕ್ಕಳಿಗೆ ಸಿಗುತ್ತದೆ.

ಮಕ್ಕಳಿಗೆ ಇಂಡಿಪೆಂಡೆನ್ಸ್‌ ಹಾಗೂ ಕಾನ್ಫಿಡೆನ್ಸ್‌ ಸಿಗುತ್ತದೆ. ತನಗೆ ಯಾವ ವಿಷಯದ ಮೇಲೆ ಆಸಕ್ತಿ ಇದೆ ಎನ್ನುವುದು ಗೊತ್ತಾಗುತ್ತದೆ.

ಮಕ್ಕಳ ಕ್ರಿಯೇಟಿವ್‌ ಸೈಡ್‌ನ ಮೆದುಳಿಗೆ ವ್ಯಾಯಾಮ ಆಗುತ್ತದೆ. ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಉತ್ತಮವಾಗಿ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !