ಕಾಳಿ ಕುರಿತು ಮೊಯಿತ್ರಾ ಹೇಳಿಕೆಗೆ ವ್ಯಾಪಕ ವಿರೋಧ: ಟಿಎಂಸಿ ಅನ್​ಫಾಲೋ ಮಾಡಿದ ಸಂಸದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಳಿ ಕುರಿತಾಗಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ನೀಡಿದ ಹೇಳಿಕೆಯನ್ನು ಅವರದೇ ಪಕ್ಷ ತೃಣಮೂಲ ಕಾಂಗ್ರೆಸ್ ತ್ರೀವ ಖಂಡಿಸಿದ್ದು, ಇದೀಗ ಮೊಯಿತ್ರಾ ಪಕ್ಷದ ಟ್ವಿಟರ್ ಹ್ಯಾಂಡಲ್ ಅನ್ನು ಅನ್ ಫಾಲೋ ಮಾಡಿದ್ದಾರೆ.
ಸದ್ಯ ಮಹುವಾ ಮೊಯಿತ್ರಾ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದು, ಪಕ್ಷದ ಹ್ಯಾಂಡಲ್ ಅನ್ನು ಅನ್​ ಫಾಲೋ ಮಾಡಿದ್ದಾರೆ.
‘ಕಾಲಿ’ ಸಾಕ್ಷ್ಯಚಿತ್ರದ ಪೋಸ್ಟರ್ ಬಗ್ಗೆ ದೇಶಾದ್ಯಂತ ಸದ್ಯ ವಿವಾದ ಏರ್ಪಟ್ಟಿದೆ. ಈ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ ಪ್ರಶ್ನೆಗೆ, ‘ಕಾಳಿಮಾತೆ ನನ್ನ ಪಾಲಿಗೆ ಮಾಂಸ ತಿನ್ನುವ, ಅಲ್ಕೊಹಾಲ್ ಸ್ವೀಕರಿಸುವ ದೇವತೆ. ನಿಮ್ಮ ದೇವರನ್ನು ಕಲ್ಪನೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ’ಎಂದು ಹೇಳಿದ್ದರು. ಈ ಹೇಳಿಕೆಯು ಈಗ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದೆ.
ಮೊಯಿತ್ರಾ ಹೇಳಿಕೆಯನ್ನು ಸ್ವಂತ ಪಕ್ಷವೇ ಅನುಮೋದಿಸಲಿಲ್ಲ. ಟಿಎಂಸಿಯ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ, ‘ದೇವತೆ ಕಾಳಿಮಾತೆಯ ಬಗ್ಗೆ ಸಂಸದೆ ಮಹುವಾ ಮೊಯಿತ್ರಾ ಅವರ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಆ ಹೇಳಿಕೆಗಳನ್ನು ಪಕ್ಷವು ಯಾವುದೇ ರೀತಿಯಲ್ಲಿಯೂ ಅನುಮೋದಿಸುವುದಿಲ್ಲ.’ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!