September 26, 2026
Saturday, September 26, 2026
spot_img

ಆಲೂರಿನಲ್ಲಿ ಮನೆ ಹಟ್ಟಿಗೇ ನುಗ್ಗಿದ ಕಾಡಾನೆ: ಜಾನುವಾರುಗಳ ಮೇಲೆ ಅಟ್ಯಾಕ್

ದಾಂಡೇಲಿ : ಕಾಡಾನೆಯೊಂದು ದನದ ಕೊಟ್ಟಿಗೆಗೆ ನುಗ್ಗಿ ಕೊಟ್ಟಿಗೆ ದ್ವಂಸ‌ ಮಾಡಿ, ಎಮ್ಮೆಗೆ ಮತ್ತು ಕರುವಿಗೆ ಗಾಯಗೊಳಿಸಿದ್ದಲ್ಲದೇ ಕಬ್ವಿನ ಗದ್ದೆಗೂ ದಾಳಿ ಮಾಡಿದ ಘಟನೆ ಸೋಮವಾರ ನಸುಕಿನ ವೇಳೆ ದಾಂಡೇಲಿ ತಾಲೂಕಿನ ಆಲೂರಿನಲ್ಲಿ ನಡೆದಿದೆ.

ಆಲೂರಿನಲ್ಲಿ ಪುಂಡಲೀಕ ಜಾಧವ ಎಂಬವರ ಹೊಲದಲ್ಲಿರುವ ದನದ ಕೊಟ್ಟಿಗೆಯನ್ನು ಕಾಡಾನೆ ಧ್ವಂಸಗೊಳಿಸಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಎಮ್ಮೆ ಮತ್ತು ಎಮ್ಮೆಯ ಕರುವಿಗೆ ಗಾಯವಾಗಿದೆ.ಮಾಹಿತಿಯ ಪ್ರಕಾರ ಈ ಹೊಲವನ್ನು ರೈತ ವಿಷ್ಣು ದಾನಪ್ಪ ವಾಟ್ಲೇಕರ್ ಎಂಬವರು ನಡೆಸುತ್ತಿದ್ದರು ಎನ್ನಲಾಗಿದೆ.

Must Read