October 14, 2026
Wednesday, October 14, 2026
spot_img

ಈಗಲಾದರೂ ಕೊನೆಗಾಣಲಿದೆಯಾ ರಷ್ಯಾ-ಉಕ್ರೇನ್‌ ವಾರ್‌? ಡೊನಾಲ್ಡ್‌ ಟ್ರಂಪ್‌ – ಝೆಲೆನ್ಸ್ಕಿ ಮಹತ್ವದ ಮಾತುಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್‌ ನಡುವಿನ ಯುದ್ಧಕ್ಕೆ ಫುಲ್‌ಸ್ಟಾಪ್‌ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಯತ್ನ ಪಡುತ್ತಲೇ ಇದ್ದಾರೆ. ಇದೇ ಪ್ರಯತ್ನವನ್ನು ಇನ್ನೊಮ್ಮೆ ಮಾಡೋದಕ್ಕೆ ಅಮೆರಿಕ ಅಧ್ಯಕ್ಷರು ತಯಾರಾಗಿದ್ದು, ನಾಳೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲಿದ್ದಾರೆ.

ನಾಳೆ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿದೆ. ಇಲ್ಲಿ ಹಲವು ದೇಶಗಳು ನಾಯಕರು ಭಾಗಿಯಾಗಲಿದ್ದಾರೆ.ಇದೇ ವೇಳೆ ಡೊನಾಲ್ಡ್‌ ಟ್ರಂಪ್‌ ಹಾಗೂ ಝೆಲೆನ್ಸ್ಕಿ ಭೇಟಿಯಾಗಲಿದ್ದಾರೆ. ಉಕ್ರೇನ್‌ನ ಮುಖ್ಯ ಸಮಾಲೋಚಕ ಮತ್ತು ವಿದೇಶಿ ಗುಪ್ತಚರ ಸೇವೆಯ ಮುಖ್ಯಸ್ಥ ರುಸ್ತಮ್ ಉಮೆರೋವ್ ಮಾತುಕತೆಗಳನ್ನು ಆಯೋಜಿಸಲು ಶ್ವೇತಭವನದ ರಾಯಭಾರಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವಿನ ದೂರವಾಣಿ ಸಂಭಾಷಣೆಯ ನಂತರ ಈ ಸಭೆಗೆ ಒಪ್ಪಂದವಾಗಿದೆ. ಇಬ್ಬರೂ ನಾಯಕರು ನ್ಯೂಯಾರ್ಕ್‌ನಲ್ಲಿ ಭೇಟಿಯಾಗಲು ಸಮ್ಮತಿಸಿದ್ದಾರೆ.

ನಾನು ಟ್ರಂಪ್‌ ಅವರ ಜತೆ ಮಾತನಾಡಿದ್ದೇನೆ. ಮುಖ್ಯವಾದ ವಿಷಯದ ಬಗ್ಗೆ ಮಾತನಾಡಿದ್ದೇವೆ. ನ್ಯೂಯಾರ್ಕ್‌ನಲ್ಲಿ ಮುಖಾಮುಖಿ ಕುಳಿತು ಮಾತನಾಡುತ್ತೇವೆ. ನಮ್ಮ ಮಾತುಕತೆಯಿಂದ ಹಲವು ಬದಲಾವಣೆಗಳು ಬರಬಹುದು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

Must Read