ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಯಶ್ ಅಭಿನಯದ ‘ಟಾಕ್ಸಿಕ್’ ಹಾಗೂ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರಗಳಲ್ಲಿ ಮಹಿಳೆಯರ ಪಾತ್ರದ ಕುರಿತು ಚರ್ಚೆಗಳು ಆಗಿಂದಾಗೆ ನಡೆಯುತ್ತಿರುತ್ತವೆ. ಈಗ ಇದೇ ವಿಷ್ಯಕ್ಕೆ ನಟಿ ತಾಪ್ಸಿ ಪನ್ನು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ತಾಪ್ಸಿ ಏನಂದ್ರು?
‘ಗಾಂಧಾರಿ’ ಸಿನಿಮಾದ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಫುಲ್ ಗರಂ ಆಗಿಯೇ ಮಾತಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಚರ್ಚೆಗೂ ನೈಜ ಜಗತ್ತಿನ ಪ್ರೇಕ್ಷಕರ ಪ್ರತಿಕ್ರಿಯೆಗೂ ನೇರ ಸಂಬಂಧ ಇರೋದೇ ಇಲ್ಲ ಎಂದಿದ್ದಾರೆ. ವಿಶೇಷವಾಗಿ ಮಾಸ್ ಸಿನಿಮಾಗಳು ಸಾಮಾಜಿಕ ಜಾಲತಾಣದ ಟೀಕೆಗಳಿಗೆ ಹೆಚ್ಚು ಸ್ಪಂದಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗ ಸದ್ಯ ಚಿತ್ರರಂಗದಲ್ಲಿ ಪರಿಸ್ಥಿತಿ ಹೇಗಿದೆ ಅಂದ್ರೆ ‘ಬೇಡಿಕೆ ಇದೆ, ಹೀಗಾಗಿ ನಾವು ಅದನ್ನೇ ಕೊಡ್ಬೇಕು; ಇಲ್ಲದಿದ್ದರೆ ಹಣ ಗಳಿಸುವುದು ಹೇಗೆ?’ ಅನ್ನುವಂತಿದೆ. ಇದರಿಂದಾಗಿ ಕಲೆ ಮತ್ತು ಸಿನಿಮಾದ ಕರಕುಶಲತೆ ಕಡಿಮೆಯಾಗುತ್ತಿದೆ ಎಂದರು.

‘ಪೆದ್ದಿ’ಯಲ್ಲಿ ಜಾನ್ವಿ ಕಪೂರ್ ಪಾತ್ರದ ಅತಿಯಾದ ಗ್ಲಾಮರೈಸೇಶನ್ ಹಾಗೂ ಕ್ಯಾಮೆರಾ ವರ್ಕ್ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ಇದಾದ ಬಳಿಕ ಕೆಲವು ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲಾಗಿತ್ತು. ಇದೀಗ ತಾಪ್ಸಿ ಪನ್ನು ಇದೇ ವಿಚಾರಕ್ಕೆ ಹೇಳಿಕೆ ನೀಡಿರುವುದು ಚರ್ಚೆಗೆ ಮತ್ತಷ್ಟು ಜೋರಾಗೋಕೆ ಕಾರಣ ಎನ್ನಬಹುದು.



