ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲದಲ್ಲಿ ಹಲವು ಪ್ರದೇಶಗಳು ಮಂಜುಮುಸುಕಿದ ವಾತಾವರಣದಲ್ಲಿರುವುದರಿಂದ ಭಾರತೀಯ ರೈಲ್ವೆ ಇಲಾಖೆ 740 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದುಗೊಳಿಸಿದೆ.
ಈ ಹಿಂದೆ ಇಲಾಖೆ ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳ 6 ಜೋಡಿ ರೈಲುಗಳನ್ನು 3 ತಿಂಗಳ ಕಾಲ ರದ್ದುಗೊಳಿಸುವುದಾಗಿ ತಿಳಿಸಿತ್ತು. ಇದರ ನಡುವೆ ಈಗ ಮತ್ತೆ 740 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಐಆರ್ ಟಿಸಿ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿರುವ ಪ್ರಯಾಣಿಕರ ಟಿಕೆಟ್ ಆಟೋಮ್ಯಾಟಿಕ್ ರದ್ದಾಗಲಿದೆ. ಬುಕ್ಕಿಂಗ್ ಹಣ ಕೂಡ ಖಾತೆಗೆ ಜಮೆಯಾಗಲಿದೆ. ಇನ್ನು ಎನ್ ಟಿಇಎಸ್ ಆಪ್ ನಲ್ಲಿ ಬುಕ್ ಮಾಡಿದ್ದರೆ ಅದರ ಅಧಿಕೃತ ವೆಬ್ ಸೈಟ್ ಮೂಲಕ ಯಾವ ರೈಲುಗಳು ರದ್ದಾಗಿವೆ ಎಂದು ಮಾಹಿತಿ ತಿಳಿಯಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.