May 27, 2026
Wednesday, May 27, 2026
spot_img

SHOCKING | ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಮಹಿಳೆಯಲ್ಲಿ ಎಬೋಲಾ ಲಕ್ಷಣಗಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೂರದ ದೇಶದಲ್ಲಿ ಹರಡುತ್ತಿದ್ದ ಎಬೋಲಾ ಮಹಾಮಾರಿ ಇದೀಗ ಭಾರತಕ್ಕೂ ಕಾಲಿಟ್ಟಿರುವ ಶಂಕೆ ಎದುರಾಗಿದೆ. ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಮಹಿಳೆಯೊಬ್ಬರಿಗೆ ಎಬೋಲಾ ಲಕ್ಷಣಗಳು ಕಾಣಿಸಿಕೊಂಡಿವೆ.

ದಕ್ಷಿಣ ಆಫ್ರಿಕಾದಿಂದ ಬಂದಿರುವ ಮಹಿಳೆಗೆ ಎಬೋಲಾ ಲಕ್ಷಣಗಳು ಕಾಣಿಸಿವೆ. ಈ ಕಾರಣದಿಂದ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡಿದ್ದು, ಮಹಿಳೆಯನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ.

ಸೋಂಕು ಇರುವುದನ್ನು ದೃಢಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರುವವರೆಗೂ ಮಹಿಳೆ ಐಸೋಲೇಷನ್‌ನಲ್ಲಿಯೇ ಇರಬೇಕಾಗುತ್ತದೆ. ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಮಹಿಳೆಯ ಸಂಪರ್ಕಕ್ಕೆ ಬಂದವರ ಮೇಲೂ ನಿಗಾ ಇಡಲಾಗಿದೆ.

ಉಗಾಂಡಾದ ರಾಜಧಾನಿಯ ಕ್ಯಾಂಪಾಲಾ ನಿವಾಸಿ ನಗಿರೆ ಲತೀಫಾ ಎನ್ನುವ ಮಹಿಳೆ ಬೆಂಗಳೂರಿಗೆ ಆಗಮಿಸಿ ಖಾಸಗಿ ಹೊಟೇಲ್‌ ಒಂದರಲ್ಲಿ ತಂಗಿದ್ದರು. ಇವರು ಬೆಂಗಳೂರಿಗೆ ಬಂದು ನಾಲ್ಕು ದಿನಗಳಾಗಿವೆ. ಮಹಿಳೆಯಲ್ಲಿ ಎಬೋಲಾ ಲಕ್ಷಣಗಳು ಕಾಣಿಸಿದ ನಂತರ ಆಂಬುಲೆನ್ಸ್‌ ಮೂಲಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಉಗಾಂಡಾ ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸೇರಿದಂತೆ ಎಬೋಲಾ ಅಪಾಯ ಇರುವ ಆಫ್ರಿಕಾ ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ಆರೋಗ್ಯ ನಿಗಾದಲ್ಲಿಡಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !