ಹೊಸದಿಗಂತ ವರದಿ, ಮಂಡ್ಯ:
ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರ ಗ್ರಾಮದ ರಾಜಪ್ಪಸ್ವಾಮಿ ಎಂಬುವರ ಪತ್ನಿ ಜ್ಯೋತಿ (40) ರಾಸುಗಳಿಗೆ ಜಮೀನಿನಲ್ಲಿ ಮೇಯು ತರಲು ಹೋಗಿದ್ದ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಬುಧವಾರ ಮಧ್ಯಾಹ್ನ ರಾಸುಗಳಿಗೆ ಜ್ಯೋತಿ ಮೇಯು ಕಟಾವು ಮಾಡುತ್ತಿದ್ದ ವೇಳೆ ವಿಷಪೂರಿತ ಹಾವು ಕಚ್ಚಿದ್ದು, ನೋವಿನಿಂದ ನರಳುತ್ತಿದ್ದ ಜ್ಯೋತಿ ಅವರನ್ನು ಕುಟುಂಬಸ್ಥರು ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಬುಧವಾರ ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯ ಮಾವ ನೀಡಿರುವ ದೂರಿನ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.