ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ: ದೂರು ದಾಖಲು

ಹೊಸದಿಗಂತ ವರದಿ,ಅಂಕೋಲಾ:

ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ರಾಮನಗುಳಿ ನಿವಾಸಿ ರುಕ್ಸಾನಾ ಬೇಗಂ ಮೂಸಾ ಶೇಖ್(29) ಈಕೆ ತನ್ನ ಮಕ್ಕಳಾದ ಮೂರನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಸಿರಾಜ್ ಮೂಸಾ ಶೇಖ್ (9) ಎರಡನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಸರ್ತಾಜ್ ಮೂಸಾ ಶೇಖ್ (8) ಮತ್ತು ಒಂದೂವರೆ ವರ್ಷದ ಮಗಳು ಆಯೇಷಾ ಅವರೊಂದಿಗೆ ಅಕ್ಟೋಬರ್ 28 ರಂದು ರಾತ್ರಿ ಯಾರಿಗೂ ಹೇಳದೆ ಮನೆಯಿಂದ ಹೋದವಳು ತಿರುಗಿ ಬಂದಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಮಹಿಳೆಯ ಪತಿ ಮೂಸಾ ಶೇಖ್ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!