ಮಹಿಳಾ ಮೋರ್ಚಾದಿಂದ ಪ್ರಧಾನ ಮಂತ್ರಿ ಕ್ಷೇಮಕ್ಕಾಗಿ ಮೃತ್ಯುಂಜಯ ಜಪ

ದಿಗಂತ ವರದಿ, ಚಿತ್ರದುರ್ಗ:

ಪ್ರಧಾನಿ ನರೇಂದ್ರ ಮೋದಿ ಅವರು ಧೀರ್ಘಾಕಾಲ ಚೆನ್ನಾಗಿ ಬದುಕಿ ಬಾಳುವಂತೆ ಕೋರಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ನಗರದ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳ ಹಿಂದೆ ಮಹಾ ಮೃತ್ಯುಂಜಯ ಜಪವನ್ನು ನಡೆಸಲಾಯಿತು.
ಪಂಜಾಬ್ ರಾಜ್ಯದ ಭೇಟಿಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಭದ್ರತೆ ಲೋಪವಾಗಿ ಇಪ್ಪತ್ತು ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ದೊಡ್ಡ ಅನಾಹುತದಿಂದ ಪಾರಾಗಿ ಬಂದಿರುವುದಕ್ಕೆ ವಿಘ್ನಗಳು ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ನಗರಸಭೆ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸರಸ್ವತಿ, ಶಾಂತಮ್ಮ, ತೀರ್ಥಾನಂದಮ್ಮ, ರತ್ನಮ್ಮ, ವೀಣ, ಕವನ, ಭಾರ್ಗವಿ, ಲೇಪಾಕ್ಷಿ, ಶೀಲಾ, ಸರಸ್ವತಿ, ವೇದಾವತಿ, ವಿಜಯಲಕ್ಷ್ಮಿ, ಪೂರ್ಣಿಮ, ಶಾಂತಮ್ಮ, ಅರುಣ, ಇವರುಗಳು ಮಹಾ ಮೃತ್ಯುಂಜಯ ಜಪದಲ್ಲಿ ಪ್ರಧಾನಿ ಮೋದಿಗೆ ಯಾವುದೇ ಅವಘಡಗಳು ಎದುರಾಗಬಾರದೆಂದು ನೀಲಕಂಠೇಶ್ವರಸ್ವಾಮಿಯಲ್ಲಿ ಪ್ರಾರ್ಥಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!