September 17, 2026
Thursday, September 17, 2026
spot_img

ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದ ಅಂಗಡಿ ಮುಂದೆ ನಿಂತ ನಾರಿಯರು, ಉಗ್ರಹೋರಾಟದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕುಡಿತದ ಹುಚ್ಚಿನಿಂದ ಉದ್ಧಾರ ಆದ ಮನೆಗಳಿಲ್ಲ, ಅದರಲ್ಲಿಯೂ ಮನೆಯ ನಾರಿ ಒಮ್ಮೆ ಸಿಡಿದೆದ್ದರೆ ಯಾರೂ ಮಾತಾಡೋಕೆ ಸಾಧ್ಯವೇ ಇಲ್ಲ. ಶಿರಾ ತಾಲೂಕಿನ ಹಳ್ಳಿಯೊಂದರಲ್ಲಿ ಮಹಿಳಾಮಣಿಗಳು ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಶಿರಾ ತಾಲೂಕಿನ ಸಾಕ್ಷಿಹಳ್ಳಿಯಲ್ಲಿ ಕುಂಬಾರಳ್ಳಿ ಸ್ತ್ರೀ ಸಂಘದ ಮಹಿಳೆಯರು ಬೆಳಿಗ್ಗೆ 6 ಗಂಟೆಗೆ ಚಿಲ್ಲರೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ ಎಮ್‌ಎಸ್‌ಐಎಲ್ ಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಘದ ಮಹಿಳೆಯರು, ಅಕ್ರಮ ಮಾರಾಟ ನಿಲ್ಲಿಸದಿದ್ದರೆ ಅಂಗಡಿಗೆ ಬೀಗ ಹಾಕುವ ಮತ್ತು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !