ಹೊಸದಿಗಂತ ವರದಿ,ಕುಶಾಲನಗರ:
ಕರಿಮೆಣಸು ಕುಯ್ಯುವ ಕೆಲಸದಲ್ಲಿ ನಿರತನಾಗಿದ್ದ ವ್ಯಕ್ತಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಬೆಟಗೇರಿಯಲ್ಲಿ ನಡೆದಿದೆ.
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ರಂಗಸಮುದ್ರದ ವಿರುಪಾಕ್ಷಪುರ ನಿವಾಸಿ ಪ್ರೇಮ (42) ಮೃತ ದುರ್ದೈವಿ.
ಬೆಟಗೇರಿ ಗ್ರಾಮದ ನಾಲೆ ಗಣೇಶ, ಧರ್ಮಜಯ ಎಂಬವರ ತೋಟದಲ್ಲಿ ಕರಿಮೆಣಸು ಕುಯ್ಯುವ ಕೆಲಸಕ್ಕೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ. ಮರದಿಂದ ಬಿದ್ದು ಎದೆ ಹಾಗೂ ಕಾಲಿಗೆ ಘಾಸಿ ಉಂಟಾಗಿದೆ. ಮೃತನ ಕುಟುಂಬದವರಿಗೆ ತಿಳಿಸದೆ ಗಾಯಾಳುವನ್ನು ತೋಟದಿಂದ ಸೀದಾ ಆಸ್ಪತ್ರೆಗೆ ಸಾಗಿಸಿದ ತೋಟದ ಮಾಲೀಕನ ವಿರುದ್ದ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ