ಹಾರುವ ಕಾರುಗಳು, ಟ್ಯಾಕ್ಸಿಗಳಿಗಾಗಿ ವಿಶ್ವದ ಮೊದಲ ವರ್ಟಿಪೋರ್ಟ್ ನಿಲ್ದಾಣ ಉದ್ಘಾಟನೆಗೆ ಸಿದ್ಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವದೆಲ್ಲೆಡೆಡೆ ಅತ್ಯಂತ ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ತಂತ್ರಜ್ಞಾನಗಳಲ್ಲಿ ಹಾರುವ ಕಾರುಗಳ ತಯಾರಿಕೆಯೂ ಒಂದು.
ವಿಶ್ವದ ಅನೇಕ ಕಂಪನಿಗಳು ಹಾರುವ ಕಾರುಗಳ ತಯಾರಿಕೆಯಲ್ಲಿ ತೊಡಗಿವೆ. ಇಷ್ಟು ದಿನ ಕಲ್ಪನೆಯಲ್ಲಿ, ಪ್ರಾಯೋಗಿಕ ಹಂತಗಳಲ್ಲಿದ್ದ ಹಾರುವ ಕಾರುಗಳ ಸಂಚಾರ ವಿಚಾರ ಇದೀಗ ವಾಸ್ತವಿಕ ರೂಪದಲ್ಲಿ ಕಾರ್ಯಸಾಧುವಾಗುತ್ತಿದೆ. ಇನ್ನೇನು ಆಗಸವು ಹಾರುವ ಕಾರುಗಳಿಂದ ತುಂಬಿ ಹೋಗುವ ಕಾಲ ದೂರವಿಲ್ಲ. ಹೌದು.. ಹಾರುವ ಕಾರುಗಳ ಮೊದಲ ‌ʼವರ್ಟಿಪೋರ್ಟ್ ಏರ್‌ ಪೋರ್ಟ್‌ʼ ಈ ವಾರ ಉದ್ಘಾಟನೆಗೆ ಸಿದ್ಧವಾಗಿದೆ.
ಅರ್ಬನ್‌ ಏರ್‌ ಪೋರ್ಟ್‌ ಹೆಸರಿನ ಈ ನಿಲ್ದಾಣವನ್ನು ಅಮೆರಿಕದ ಕೋವೆಂಟ್ರಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದೊಂದು EVTOL ಗಳು (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್) ಏರ್ ಪೋರ್ಟ್. ಡ್ರೋನ್‌ಗಳು, ಹಾರುವ ಕಾರುಗಳು ಮತ್ತು ಹಾರುವ ಟ್ಯಾಕ್ಸಿಗಳನ್ನು ನಿಲುಗಡೆಗೊಳಿಸಲು, ಹಾರಾಟಕ್ಕೆ ಅನುವಾಗುವಂತೆ ಸುಸಜ್ಜಿತವಾಗಿ ನಿಲ್ದಾಣವನ್ನು ನಿರ್ಮಿಸಲಾಗಿದೆ.
ಸಾರಿಗೆ ವ್ಯವಸ್ಥೆ ಹೊಸ ಯುಗದತ್ತ ದಾಪುಗಾಲಿಡುತ್ತಿದೆ. ನಗರಗಳಲ್ಲಿ ಜನರಿಗೆ ದಟ್ಟಣೆಮುಕ್ತ ಪ್ರಯಾಣಕ್ಕೆ ಅವಕಾಶಗಳನ್ನು ಕಲ್ಪಿಸುತ್ತದೆ. ಜನರಲ್ಲಿ ಹಿಂದೆಂದಿಗಿಂತಲೂ ಆರೋಗ್ಯಕರ, ಸಂತೋಷದ ವಾತಾವರಣವರನ್ನು ಇದು ಹುಟ್ಟುಹಾಕಲಿದೆ. ನಗರ- ನಗರಗಳ ನಡುವೆ ವೇಗದ ಸಂಚಾರ ವ್ಯವಸ್ಥೆಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಎಂದು ನಿಲ್ದಾಣದ ಸಂಸ್ಥಾಪಕ ರಿಕಿ ಸಂಧು ವಿಶ್ವಾಸ ವ್ಯಕ್ತಪಡಿಸುತ್ತಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!