ಹೊಸದಿಗಂತ ವರದಿ, ಮಂಗಳೂರು:
ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಾಂತಾವರದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರ ಅಂತ್ಯಕ್ರಿಯೆ ಬೆಳುವಾಯಿ ಸ್ಮಶಾನದಲ್ಲಿ ನೆರವೇರಿತು.
ಕಾಂತಾವರ ದೇವಸ್ಥಾನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮ ಭಟ್ಟರ ಆರೋಗ್ಯ ಕಳೆದ ನಾಲ್ಕು ತಿಂಗಳಿಂದ ಹದಗೆಟ್ಟಿತ್ತು. ಮುಳಿಯಾಲ ಭೀಮ ಭಟ್ ಅವರು ಆರಂಭದಲ್ಲಿ ಧರ್ಮಸ್ಥಳ ಮೇಳ, ಬಳಿಕ ಸುದೀರ್ಘ ಕಾಲ ಕಟೀಲು ಮೇಳದ ಕಲಾವಿದರಾಗಿದ್ದರು. ಶ್ರೀದೇವಿ ಮಹಾತ್ಮೆ ಪ್ರಸಂಗದ ದೇವಿ ಪಾತ್ರದಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ದೇವಿ ಭಟ್ರು ಎಂದೇ ಖ್ಯಾತಿ ಗಳಿಸಿದ್ದರು.
ಕಾಂತಾವರ ದೇವಸ್ಥಾನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಮಾಡಿದ್ದರು.