September 13, 2026
Sunday, September 13, 2026
spot_img

ಬಿ-ಟೌನ್‌ನಲ್ಲಿ ಯಶ್ ಮ್ಯಾಜಿಕ್: ‘ಟಾಕ್ಸಿಕ್’ ಸಿನಿಮಾದಿಂದ ಲೈಫೇ ಚೇಂಜ್ ಆಯ್ತು ಎಂದ ಅಕ್ಷಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಚಾರ್ಮಿಂಗ್ ಹಾಗೂ ಸಖತ್ ಟ್ಯಾಲೆಂಟೆಡ್ ನಟ ಅಕ್ಷಯ್ ಒಬೆರಾಯ್ ಸಾಲು ಸಾಲು ದೊಡ್ಡ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ, ಇತ್ತೀಚೆಗೆ ಇಂಟರ್‌ವ್ಯೂ ಒಂದರಲ್ಲಿ ಮಾತನಾಡುತ್ತಾ ತಮ್ಮ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ರಾಕಿ ಭಾಯ್ ‘ಯಶ್’ ಮತ್ತು ನಿರ್ದೇಶಕಿ ‘ಗೀತು ಮೋಹನ್‌ದಾಸ್’ ಜೊತೆ ಕೆಲಸ ಮಾಡಿದ್ದು ತಮ್ಮ ಜೀವನವನ್ನೇ ಬದಲಾಯಿಸಿತು ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.

“ಟಾಕ್ಸಿಕ್ ಸಿನಿಮಾ ನನಗೆ ಬರೀ ಒಂದು ಪ್ರಾಜೆಕ್ಟ್ ಅಲ್ಲ, ಅದೊಂದು ಹೊಸ ಅನುಭವ. ನಾವೆಲ್ಲಾ ಜೀವನದಲ್ಲಿ ಸಣ್ಣಪುಟ್ಟ ಭಯ, ಲಿಮಿಟೇಷನ್‌ಗಳನ್ನು ಇಟ್ಟುಕೊಂಡು ಕುಳಿತುಬಿಡ್ತೀವಿ. ಆದ್ರೆ ಯಶ್ ಮತ್ತು ಗೀತು ಜೊತೆ ಕೆಲಸ ಮಾಡಿದ್ಮೇಲೆ ನನಗೆ ಅರ್ಥವಾಗಿದ್ದು ಒಂದೇ ಯಾವುದೇ ಲಿಮಿಟ್ ಇರಬಾರದು, ಸದಾ ಆಕಾಶಕ್ಕೇ ಕೈ ಚಾಚಬೇಕು, ಎಷ್ಟೇ ಕಷ್ಟ ಬಂದರೂ ದೊಡ್ಡ ಕನಸು ಕಾಣಬೇಕು ಅನ್ನೋದನ್ನು ಈ ಸಿನಿಮಾ ನನಗೆ ಕಲಿಸಿಕೊಟ್ಟಿದೆ.” ಎಂದು ಅಕ್ಷಯ್ ಖುಷಿಯಿಂದ ಹೇಳಿದ್ದಾರೆ.

‘ಟಾಕ್ಸಿಕ್’ ಜೊತೆಗೆ ತಮ್ಮ ಮುಂಬರುವ ಸಸ್ಪೆನ್ಸ್ ಡ್ರಾಮಾ ‘ಲವ್ ಲಾಟರಿ’ ಬಗ್ಗೆಯೂ ಮಾತನಾಡಿದ ಅಕ್ಷಯ್, “ಸಿನಿಮಾ ಅಂದಮೇಲೆ ಮೊದಲಿಗೆ ಜನರಿಗೆ ಮನರಂಜನೆ ನೀಡಬೇಕು. ಅದರ ಜೊತೆಗೆ ಒಂದು ಒಳ್ಳೆ ಮೆಸೇಜ್ ಕೊಟ್ಟರೆ ಅದಕ್ಕಿಂತ ದೊಡ್ಡ ವಿಷಯ ಇನ್ನೊಂದಿಲ್ಲ. ಜೊತೆಗೆ ಲವ್ ಲಾಟರಿ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ತುಂಬಾ ಶೇಡ್ಸ್ ಮತ್ತು ಎಮೋಷನ್‌ಗಳಿವೆ. ಒಬ್ಬ ನಟನಿಗೆ ಇಂಥ ಕಾಂಪ್ಲೆಕ್ಸ್ ಪಾತ್ರ ಸಿಕ್ಕಾಗ ‘ಯೆಸ್’ ಅನ್ನದೇ ಇರಲು ಸಾಧ್ಯವೇ ಇಲ್ಲ,” ಎಂದಿದ್ದಾರೆ.

ಇದರ ಜೊತೆಗೆ ನೀರಜ್ ಪಾಂಡೆ ಮತ್ತು ಮನೋಜ್ ಬಾಜಪೇಯಿ ಅವರಂತಹ ದೈತ್ಯ ನಟ-ನಿರ್ದೇಶಕರ ಜೊತೆ ಕೆಲಸ ಮಾಡಿದ್ದು ತಮ್ಮ ನಟನಾ ಪ್ರಯಾಣಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಅಂತ ಅಕ್ಷಯ್ ಹೇಳಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !